Publish Date: Thu, 18 Apr 2019 (16:48 IST)
Updated Date: Thu, 18 Apr 2019 (16:50 IST)
ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಹಕ್ಕುಚಲಾಯಿಸಿದ್ರು.
ಮತದಾನದ ಬಳಿಕ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದು, ಮತದಾನದಲ್ಲಿ ಹಲವು ಯುವ ಮತದಾರರರು, ಹಿರಿಯ ನಾಗರಿಕರು ಭಾಗವಹಿಸಿದ್ದರು. ಇವರ ಉತ್ಸಾಹ ನೋಡಿ ತುಂಬಾ ಖುಷಿಯಾಗಿದೆ. ಹಾಗೇ ನಾನು ಕೂಡ ಅವರೊಂದಿಗೆ ಒಂದು ಗಂಟೆ ಕಾದು ಮತದಾನ ಮಾಡಿದ್ದೇನೆ ಎಂದರು.
ಇನ್ನು ರಾಜ್ಯದಲ್ಲಿ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯಿಂದ ಏನು ವ್ಯತ್ಯಾಸ ಆಗಲ್ಲ ಎಂದ ಅವರು, ನಮ್ಮ ಪಕ್ಷದ ಎಲ್ಲಾ ಕಾರ್ಯಾಕರ್ತರು ಒಟ್ಟಾಗಿ ಕೆಲಸ ಮಾಡಿದ್ದಾರೆ. ಹೀಗಾಗಿ ಈ ಭಾರಿ ಬಿಜೆಪಿಗೆ ಭಾರಿ ಬಹುಮತ ಲಭಿಸಲಿದೆ ಎಂದ್ರು.