Publish Date: Thu, 18 Apr 2019 (16:19 IST)
Updated Date: Thu, 18 Apr 2019 (16:21 IST)
ಲೋಕಸಭೆ ಚುನಾವಣೆಯ ಮತದಾನದಲ್ಲಿ ಈ ಬಾರಿಯೂ ಗೊಂದಲ, ಗಲಾಟೆಗಳು ಅಲ್ಲಲ್ಲಿ ಆಗಿವೆ.
ಮಂಡ್ಯದಲ್ಲಿ ಮತಯಂತ್ರ ಅದಲು ಬದಲಾಗಿ ಇಟ್ಟಿದ್ದ ಹಿನ್ನೆಲೆಯಲ್ಲಿ ಕೆಲಕಾಲ ಗೊಂದಲ ಹಾಗೂ ಪರಿಸ್ಥಿತಿ ಗಂಭೀರತೆಯನ್ನು ಪಡೆದುಕೊಂಡಿತ್ತು.
ಏಜಂಟರುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪಕ್ಷೇತರ ಅಭ್ಯರ್ಥಿ ಸುಮಲತಾ ಹಾಗೂ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಏಜಂಟರ ನಡುವೆ ಮಾತಿನ ಚಕಮಕಿ ನಡೆಯಿತು.
ಮಂಡ್ಯದ ಮದ್ದೂರಿನ ಪಣ್ಣೆದೊಡ್ಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮತಗಟ್ಟೆಗೆ ಆಗಮಿಸಿದ ಸಚಿವ ಡಿ.ಸಿ. ತಮ್ಮಣ್ಣ ಜೊತೆ ಕೂಡ ಮಾತಿನ ಚಕಮಕಿ ಆಯಿತು. ಮತಗಟ್ಟೆ ಬಳಿ ಗೊಂದಲದ ವಾತಾವರಣ ಕೆಲಕಾಲ ನಿರ್ಮಾಣವಾಗಿತ್ತು. ಡಿ.ಸಿ. ತಮ್ಮಣ್ಣ ಮತ್ತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು. ಹೀಗಾಗಿ ಬೆಳಗ್ಗೆ 8 ರಿಂದ 10.30 ರವರೆಗೆ ಮತದಾನ ಸ್ಥಗಿತಗೊಂಡಿತ್ತು.