Select Your Language

Notifications

webdunia
webdunia
webdunia
webdunia

ಸ್ಕೇಟಿಂಗ್ ಯುವಕರಿಂದ ಮತದಾನ ಜಾಗೃತಿ

ಸ್ಕೇಟಿಂಗ್ ಯುವಕರಿಂದ ಮತದಾನ ಜಾಗೃತಿ
ಮೈಸೂರು , ಗುರುವಾರ, 18 ಏಪ್ರಿಲ್ 2019 (16:13 IST)
ಸ್ಕೇಟಿಂಗ್ ಯುವಕರಿಂದ ಓಟ್ ಹಾಕುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಟೀ ಶರ್ಟ್ ಹಾಗೂ ಸ್ಟೇಟಿಂಗ್ ತೊಟ್ಟು ವಿನೂತನವಾಗಿ ಓಟ್ ಹಾಕುವಂತೆ ಮನವಿ ಮಾಡಲಾಗುತ್ತಿದೆ.

ಮೈಸೂರಿನ ಸಿದ್ದಾರ್ಥ ಲೇಔಟ್, ನಜರ್ ಬಾದ್, ಟೌನ್ ಹಾಲ್, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಶಾಲೆ, ಡಿಸಿ ಆಫೀಸ್, ಶ್ರೀ ರಾಂಪೇಟೆ ಮೈಸೂರು ಡೈರಿ ಸುತ್ತಾ ಮುತ್ತಾ ಓಟ್ ಜಾಗೃತಿ ಮಾಡಲಾಯಿತು.

ಭಾರತದ ಪ್ರಜೆಯಾಗಿ ಮತದಾನ ಮಾಡಬೇಕು. ಪ್ರತಿಯೊಬ್ಬರು ಓಟ್ ಮಾಡ ಬೇಕು. ನಮ್ಮ ತಂಡ ಎಲ್ಲರು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡುತ್ತಿದ್ದೇವೆ ಎಂದರು.

ಯಾವ ಪಕ್ಷಕ್ಕೆ, ಯಾವ ಅಭ್ಯರ್ಥಿಗೆ ಮತ ಹಾಕಿ ಅಂತ ಹೇಳುತ್ತಿಲ್ಲ. ಮತದಾನ ಮಾಡುವುದು ನಮ್ಮ ಹಕ್ಕು. ವಾಹನ ಸವಾರರಿಗೆ ಓಟ್ ಹಾಕುವಂತೆ ಮನವಿ ಮಾಡಿದ್ದೇವೆ ಎಂದರು. ಎಲ್ಲರು ತಪ್ಪದೇ ಓಟ್ ಹಾಕಿ. ಇದೇ ಮೊದಲ ಬಾರಿಗೆ ವಿನೂತನವಾಗಿ ಓಟ್ ಹಾಕುವಂತೆ ಪ್ರತಾಪ್, ಸಂದೇಶ್, ಅಂಜನ್, ಅರವಿಂದ್, ಸಂಜಯ್ ಯುವಕರಿಂದ ಓಟ್ ಜಾಗೃತಿ ನಡೆಯಿತು.




Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ಎದುರಾಳಿ ಉಮೇಶ್ ಜಾಧವ್ ಭರ್ಜರಿ ಮತಬೇಟೆ!