Publish Date: Thu, 18 Apr 2019 (16:35 IST)
Updated Date: Thu, 18 Apr 2019 (16:38 IST)
ಮತದಾನ ಗೌಪ್ಯತೆಯನ್ನು ಉಲ್ಲಂಘನೆ ಮಾಡಿರುವ ಪ್ರಕರಣಗಳು ನಡೆದಿವೆ.
ಚಿಕ್ಕಬಳ್ಳಾಪುರದಲ್ಲಿ ಮತಗಟ್ಟೆಯಲ್ಲಿ ಮತಚಲಾಯಿಸುವ ವೇಳೆ ವೀಡಿಯೋ ಚಿತ್ರೀಕರಣ ಮಾಡಿದ ಯುವಕ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಬಿ ಎಸ್ ಪಿ ಅಭ್ಯರ್ಥಿ ದ್ವಾರಕನಾಥ್ ಗೆ ಮತ ಚಲಾಯಿಸಿ ವೀಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರೆ, ಮೊತ್ತೊಬ್ಬ ಬಚ್ಚೇಗೌಡರಿಗೆ ಮತ ಚಲಾಯಿಸಿದ ಯುವಕ ಚಿತ್ರಿಕರಣ ಮಾಡಿಕೊಂಡಿದ್ದಾರೆ.
ಮತದಾನದ ಸೆಲ್ಫಿ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ ಯುವಕರು.
ಇದನ್ನು ವಾಟ್ಸಾಪ್ ಸ್ಟೇಟಸ್ ಗೆ ಬಿಎಸ್‌ಪಿ ಅಭ್ಯರ್ಥಿ ದ್ವಾರಕನಾಥ್ ಹರಿಬಿಟ್ಟಿದ್ದಾರೆ. ಮತದಾನದ ಪಾವಿತ್ರತೆಯನ್ನು ಹಾಳು ಮಾಡಿದ ವೀಡಿಯೋ ಈಗ ವೈರಲ್ ಆಗಿದೆ.