Publish Date: Sat, 20 Apr 2019 (16:38 IST)
Updated Date: Sat, 20 Apr 2019 (16:40 IST)
ನನ್ನೊಂದಿಗೆ ದೈವ ಶಕ್ತಿ ಇದೆ. ಪ್ರಧಾನಿ ನರೇಂದ್ರ ಮೋದಿ ತನ್ನ ಸ್ಥಾನದ ಗೌರವ ಬಿಟ್ಟು ಮಾತಾಡುತ್ತಾರೆ ಅಂತ ಜೆಡಿಎಸ್ ವರಿಷ್ಠ ಹೇಳಿದ್ದಾರೆ.
ನಾನೊಬ್ಬನೇ ಸ್ಟ್ರಾಂಗ್ ಅನ್ನೋ ಥರ ಮೋದಿ ಮಾತಾಡ್ತಾರೆ. ಸುಮ್ಮನೆ ಬಂಬಡಾ ಹೊಡೆಯೋದರಲ್ಲಿ ಅರ್ಥ ಇಲ್ಲ ಎಂದು ಪ್ರಧಾನಿ ಮೋದಿ ವಿರುದ್ದ ಹೆಚ್.ಡಿ.ದೇವೇಗೌಡರು ವಿಜಯಪುರದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಇನ್ನು ನನ್ನ ಅವಧಿಯಲ್ಲಿ ಇದಕ್ಕಿಂತಲೂ ಸುಭದ್ರ ಆಡಳಿತ ನೀಡಿದ್ದೆ. ಇತಿಹಾಸ ತಿರುಚಲು ಆಗಲ್ಲ. ಬಹುಮತ ಇದ್ದಾಗ್ಯೂ ಮೋದಿ ಸರಿಯಾದ ಆಡಳಿತ ನೀಡಲಿಲ್ಲ ಎಂದರು.
ಇನ್ನು ಜೆಡಿಎಸ್ ಎಂದೂ ಉತ್ತರ ಕರ್ನಾಟಕ ನಿರ್ಲಕ್ಷ್ಯ ಮಾಡಿಲ್ಲ. ಇದೊಂದು ಕುತಂತ್ರ. ಉತ್ತರ ಕರ್ನಾಟಕದಲ್ಲಿ ದೇವೇಗೌಡಾ ಬೆಳಯಬಾರದೆಂಬ ಕಾರಣಕ್ಕೆ ಹೆಣೆದ ಕುತಂತ್ರ ಅಷ್ಟೆ. ನನ್ನನ್ನು ವಿರೋಧ ಮಾಡಿದವರು ಎಲ್ಲರೂ ಸ್ವರ್ಗದಲ್ಲಿದ್ದಾರೆ. ನಾನಿನ್ನೂ ಜೀವಂತ ಇದ್ದೇನೆ. ನನ್ನೊಂದಿಗೆ ದೈವ ಶಕ್ತಿ ಇದೆ ಎಂದು ವ್ಯಂಗ್ಯವಾಡಿದರು.
ಇನ್ನು ಮಾಯಾವತಿ, ಮಮತಾ ಬ್ಯಾನರ್ಜಿ, ಶರದ ಪವಾರ, ಚಂದ್ರಬಾಬು ನಾಯ್ಡು ಇನ್ನೂ ಅನೇಕರು ಪ್ರಧಾನಿಯಾಗುವ ಅರ್ಹತೆ ಹೊಂದಿದ್ದಾರೆ. ನಾನು ಪ್ರಧಾನಿ ಆಕಾಂಕ್ಷಿ ಅಲ್ಲ. ಕಾಂಗ್ರೆಸ್ ಬೆಂಬಲವಿಲ್ಲದೇ ಪ್ರಧಾನಿ ಆಗಲು ಸಾಧ್ಯವಿಲ್ಲ. ನಾವು ಈಗಾಗಲೇ ರಾಹುಲ್ ಗಾಂಧಿ ಅವರಿಗೆ ಬೆಂಬಲ ಸೂಚಿಸಿದ್ದೆವೆ ಎಂದರು.