ಲೋಕಸಭೆ ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಜೆಡಿಎಸ್ ನಾಯಕರು ಪ್ರಚಾರ ತೀವ್ರಗೊಳಿಸಿದ್ದಾರೆ.
									
			
			 
 			
 
 			
					
			        							
								
																	ಗುಲ್ಬರ್ಗಾ ಲೋಕಸಭೆ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರು ಮಲ್ಲಿಕಾರ್ಜುನ ಖರ್ಗೆ ಪರವಾಗಿ ಕೆಲಸ ಮಾಡುತ್ತಿದ್ದಾರೆ.
									
										
								
																	ಗುರುಮಠಕಲ್ ಕ್ಷೇತ್ರದಲ್ಲಿಯೂ ಶಾಸಕ ನಾಗನಗೌಡ ಕಂದಕೂರು ಖರ್ಗೆ ಪರ ಪ್ರಚಾರ ನಡೆಸಿದ್ದಾರೆ. ಅಲ್ಲದೇ  ಗುರುಮಠಕಲ್ ಕ್ಷೇತ್ರದಲ್ಲಿ ಜೆಡಿಎಸ್ ನ ಇತರೆ ನಾಯಕರೂ ಪ್ರಚಾರ ಕೈಗೊಂಡಿದ್ದಾರೆ. ಖರ್ಗೆ ಒಬ್ಬ ಮಹಾನ್ ನಾಯಕರಾಗಿದ್ದು, ಅವರನ್ನು ಗೆಲ್ಲಿಸುವುದೇ ನಮ್ಮ ಗುರಿ ಎಂದು ಅವರು ಹೇಳಿದ್ದಾರೆ.
									
											
							                     
							
							
			        							
								
																	ಜೆಡಿಎಸ್ ನಾಯಕರೂ ಖರ್ಗೆ ಗೆಲುವಿಗೆ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಹೀಗಂತ ಜೆಡಿಎಸ್ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ ಹೇಳಿಕೆ ನೀಡಿದ್ದಾರೆ.