Select Your Language

Notifications

webdunia
webdunia
webdunia
webdunia

ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ- ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ

ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ- ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ
ಕಲಬುರಗಿ , ಶನಿವಾರ, 20 ಏಪ್ರಿಲ್ 2019 (12:30 IST)
ಕಲಬುರಗಿ : ಪ್ರಧಾನಿ ಮೋದಿ ನಂಬರ್ ಒನ್ ಕ್ರಿಮಿನಲ್. ಮೋದಿಯಂತಹ ಕ್ರಿಮಿನಲ್ ನನ್ನು ನಾನು ನೋಡಿಯೇ ಇಲ್ಲ ಎಂದು ತೆಲುಗು ನಟಿ ವಿಜಯಶಾಂತಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.


ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಪರ ಮಾತಯಾಚನೆ ಮಾಡಿ ಮಾತನಾಡಿದ ಅವರು, ಪ್ರಧಾನಿ ಮೋದಿ ತಪ್ಪು ಮಾಡುತ್ತಿದ್ದಾರೆ ಎಂಬುದು ನಮ್ಮ ಕಣ್ಣಿಗೆ ಕಾಣುತ್ತಿದೆ. ನೋಟು ಅಮಾನ್ಯೀಕರಣ, ಜಿಎಸ್ ಟಿಯಿಂದ ದೇಶದ ಕೋಟ್ಯಾಂತರ ಜನ ಬಸವಳಿದಿದ್ದಾರೆ. ವಿದೇಶದಿಂದ ಕಪ್ಪು ಹಣ ಏಕೆ ಬರಲಿಲ್ಲ. ಆದರೆ, ಇಲ್ಲಿಂದ ಉದ್ಯಮಿಗಳು ಸಾವಿರಾರು ಕೋಟಿ ಲೂಟಿ ಮಾಡಿ ವಿದೇಶಕ್ಕೆ ಪರಾರಿಯಾದರು ಎಂದು ವಾಗ್ದಾಳಿ ನಡೆಸಿದ್ದಾರೆ.


ಕಳೆದ ಐದು ವರ್ಷದಲ್ಲಿ ಮೋದಿ ಏನನ್ನೂ ಮಾಡಿಲ್ಲ. ಯುವಕರು, ಮಹಿಳೆಯರು ಯಾರು ಉದ್ಧಾರವಾಗಿಲ್ಲ. ಆತನ ವಿರುದ್ಧ ಸುದ್ದಿ ಹಾಕಿದರೆ ಅಂತಹ ವಿಡಿಯೋಗಳನ್ನೇ ಮೋದಿ ಸರ್ವನಾಶ ಮಾಡುತ್ತಾರೆ. ಇದೇ ಕಾರಣಕ್ಕೆ ಮೋದಿಯನ್ನು ಕಂಡರೆ ಮೀಡಿಯಾಗಳಿಗೂ ಭಯವಿದೆ. ಇಂತಹ ವ್ಯಕ್ತಿಯನ್ನು ನಂಬಿ ಮೋಸ ಹೋಗುವುದಕ್ಕಿಂತ ಸೂಕ್ತ ವ್ಯಕ್ತಿಗಳನ್ನು ಆರಿಸುವುದು ಉತ್ತಮ. ಅದನ್ನು ಮತದಾರರೇ ನಿಶ್ಚಯಿಸಲಿ ಎಂದು ಅವರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



 

Share this Story:

Follow Webdunia kannada

ಮುಂದಿನ ಸುದ್ದಿ

ನನಗೆ ಬಿಜೆಪಿ ಇನ್ನೂ ಸೆಟ್ ಆಗುತ್ತಿಲ್ಲ- ಉಮೇಶ್ ಜಾಧವ್ ರಿಂದ ಅಚ್ಚರಿ ಹೇಳಿಕೆ