Select Your Language

Notifications

webdunia
webdunia
webdunia
webdunia

ಪ್ರಧಾನಿ ಮೋದಿ, ಸಂಸದ ಜಿಗಜಿಣಗಿ ಇಬ್ಬರೂ ಸುಳ್ಳುಗಾರರಂತೆ

ಪ್ರಧಾನಿ ಮೋದಿ, ಸಂಸದ ಜಿಗಜಿಣಗಿ ಇಬ್ಬರೂ ಸುಳ್ಳುಗಾರರಂತೆ
ವಿಜಯಪುರ , ಶುಕ್ರವಾರ, 19 ಏಪ್ರಿಲ್ 2019 (17:59 IST)
ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವ ರಮೇಶ ಜಿಗಜಿಣಗಿ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆಂದು ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಆರೋಪ ಮಾಡಿದ್ದಾರೆ.

webdunia
ವಿಜಯಪುರದಲ್ಲಿ ಕಾಂಗ್ರೆಸ್ ನ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ್ ಈ ಆರೋಪ ಮಾಡಿಸಿದ್ದಾರೆ.ವಿಜಯಪುರ ನಗರದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಪ್ರಕಾಶ್ ರಾಠೋಡ್, ಪ್ರಧಾನಿ ನರೇಂದ್ರ ಮೋದಿ ಹಾಗೂ ರಮೇಶ್ ಜಿಗಜಿಣಗಿ ಮೇಲೆ ಆರೋಪ ಮಾಡಿದರು.

ಕೇಂದ್ರದ ಯೋಜನೆಗಳಲ್ಲಿ ಹಣ ಲೂಟಿ ಮಾಡಿದ್ದಾರೆ. ಇನ್ನು ಪ್ರಧಾನಿ ಚೌಕಿದಾರ್ ಎಂದು ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು. ಇನ್ನೂ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪತ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

webdunia
ಬಿಜೆಪಿಯವರು ಭ್ರಷ್ಟಾಚಾರ ಮಾಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಆರೋಪಿಸಿದರು. ಕಾಮನವೆಲ್ತ್ ಹಗರಣ, ಕಲ್ಲಿದ್ದಲು ಹಗರಣ, ಸೇರಿದಂತೆ ಯಾವುದೇ ಆರೋಪ ನಮ್ಮ ಮುಖಂಡರ ಮೇಲೆ ಬಂದಾಗ ರಾಜೀನಾಮೆ ನೀಡಿ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲು ಸಹಕರಿಸಿದ್ದೇವೆ ಎಂದು ಹೇಳಿದರು. ಆದರೆ ಬಿಜೆಪಿ ಮುಖಂಡರ ಮೇಲೆ ಯಾವುದೇ ಆರೋಪ ಬಂದರೂ ಕೇಂದ್ರ ಸರ್ಕಾರವಾಗಲಿ, ಬಿಜೆಪಿಯಾಗಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಿಡಿ ಕಾರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪರನ್ನ ಸೀರಿಯಸ್ ಆಗೇ ತಗೆದ್ಕೊಂಡಿಲ್ಲ…!