Publish Date: Sat, 20 Apr 2019 (12:28 IST)
Updated Date: Sat, 20 Apr 2019 (12:29 IST)
ಕಲಬುರಗಿ : ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರನ್ನು ಗೆಲ್ಲಿಸಲು ಬಿಜೆಪಿ ನಾಯಕರೆಲ್ಲರೂ ಪಣತೊಟ್ಟು ಓಡಾಡುತ್ತಿರುವಾಗ, ಅಭ್ಯರ್ಥಿ ಉಮೇಶ್ ಜಾಧವ್ ಅವರು ಮಾತ್ರ ನನಗೆ ಬಿಜೆಪಿ ಇನ್ನೂ ಸೆಟ್ ಆಗುತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಕಲಬುರಗಿಯ ಎಸ್ ಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ನನಗೆ ಡು ಆರ್ ಡೈ ಅನ್ನುವಂತ ಸ್ಥಿತಿ. ನನಗೆ ಇನ್ನೂ ಸೆಟ್ ಆಗುತ್ತಿಲ್ಲ. ರಾಜಕೀಯವಾಗಿ ಇದು ಲಾಸ್ಟ್ ಚಾನ್ಸ್ ಎಂದು ಹೇಳಿದ್ದಾರೆ.
ಹೀಗಾಗಿ ನೀವು ನನ್ನನ್ನ ಕೈ ಬಿಡಬೇಡಿ. ಈ ಯುದ್ಧದಲ್ಲಿ ನನ್ನನ್ನು ಗೆಲ್ಲಿಸಬೇಕು. ಹಾಗೇ ಗೋವಿಂದ ಕಾರಜೋಳ ಅವರೇ ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಉಮೇಶ್ ಜಾಧವ್, ಕಲಬುರಗಿ ಕ್ಷೇತ್ರದಿಂದ ಖರ್ಗೆ ವಿರುದ್ಧ ಸ್ಪರ್ಧೆಗಿಳಿದು ಇದೀಗ ಈ ರೀತಿ ಹೇಳಿಕೆ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.