ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿದ್ನಾ? ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಏಕವಚನದ ದಾಳಿ

ಸೋಮವಾರ, 22 ಏಪ್ರಿಲ್ 2019 (07:13 IST)
ಬೆಂಗಳೂರು: ಪ್ರಧಾನಿ ಮೋದಿ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಏಕವಚನದ ವಾಗ್ದಾಳಿ ನಡೆಸಿದ್ದಾರೆ.


ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ‘ಸ್ವಾತಂತ್ರ್ಯ ಬಂದಾಗ ಮೋದಿ ಹುಟ್ಟಿದ್ನಾ? ನಾನು ಮೋದಿಗಿಂತ ನಾಲ್ಕು ವರ್ಷ ದೊಡ್ಡವನು. ಮೋದಿ ಸರ್ವಾಧಿಕಾರಿಯಂತೆ ನಡೆದುಕೊಳ್ತಿದ್ದಾನೆ. ನಾನು ಮುಖ್ಯಮಂತ್ರಿ ಆಗಿದ್ದಾಗ 160 ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಿದ್ದೇನೆ. ಮೋದಿ ಏನಾದ್ರೂ ಹೇಳಿದ್ದನ್ನು ಮಾಡಿದ್ದಾನಾ?’ ಎಂದು ಸಿದ್ದರಾಮಯ್ಯ ಏಕವಚನ ಪ್ರಯೋಗ ನಡೆಸಿದ್ದಾರೆ.

ಅಷ್ಟೇ ಅಲ್ಲದೆ, ಯಾವುದೇ ಕಾರಣಕ್ಕೂ ಮೋದಿ ಮತ್ತೊಮ್ಮೆ ಗೆಲ್ಲಬಾರದು. ಅವರು ಗೆದ್ದರೆ ಮತ್ತೆ ಚುನಾವಣೆ ನಡೆಯಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸೋಲುವುದು ಖಚಿತವಾದರೆ ಸಿದ್ದರಾಮಯ್ಯ ಯಾರ ಕಾಲು ಬೇಕಾದ್ರೂ ಹಿಡಿಯುತ್ತಾರೆ-ಪ್ರತಾಪ್ ಸಿಂಹ ವ್ಯಂಗ್ಯ