ಜೆಡಿಎಸ್ ನಾಯಕರ ಭೀಕರ ಸಾವು; ಸಿಎಂಗೆ ಭಾರೀ ಆಘಾತ

ಸೋಮವಾರ, 22 ಏಪ್ರಿಲ್ 2019 (15:16 IST)
ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ನಾಯಕರಿಗೆ ಆದ ಗತಿ ಕಂಡು ಸಿಎಂಗೆ ಭಾರೀ ಆಘಾತವಾಗಿದೆ.

ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ರಾಜ್ಯದ ಜೆಡಿಎಸ್ ನ ಐವರು ಪ್ರಮುಖ ಮುಖಂಡರು ಬಲಿಯಾಗಿದ್ದಾರೆ.

ಶಾಂಗ್ರಿಲಾ ಹೋಟೆಲ್ ನಲ್ಲಿದ್ದ ಜೆಡಿಎಸ್ ನ ಒಟ್ಟು 7 ಜನ ಪ್ರಮುಖರಲ್ಲಿ 5 ಜನರು ಸಾವನ್ನಪ್ಪಿದ್ದಾರೆ. ಹನುಮಂತರಾಯಪ್ಪ, ಶಿವಕುಮಾರ, ರಂಗಪ್ಪ, ರಮೇಶ್, ಲಕ್ಷ್ಮೀನಾರಾಯಣ ಮೃತಪಟ್ಟವರಾಗಿದ್ದಾರೆ.

ಭಯೋತ್ಪಾದಕರ ದಾಳಿ ಜೆಡಿಎಸ್ ಮುಖಂಡರು ಸಾವನ್ನಪ್ಪಿರುವುದಕ್ಕೆ ನೋವಾಗಿದೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ. ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಸಿಎಂ ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಿಎಂ ಕುಮಾರಸ್ವಾಮಿಗೆ ನಟ ಯಶ್ ನೀಡಿದ್ರಾ ವಾರ್ನಿಂಗ್?