ಸಿಎಂ ಕುಮಾರಸ್ವಾಮಿಗೆ ನಟ ಯಶ್ ವಾರ್ನಿಂಗ್?

ಸೋಮವಾರ, 22 ಏಪ್ರಿಲ್ 2019 (14:59 IST)
ಲೋಕಸಭೆ ಚುನಾವಣೆಯಲ್ಲಿ ಅಂಬರೀಶ್ ಅಣ್ಣನ ಮೇಲಿನ ಪ್ರೀತಿಯಿಂದಾಗಿ ಸುಮಲತಾ ಅಮ್ಮನವರ ಪರ ಪ್ರಚಾರಕ್ಕೆ ಹೋಗಿದ್ದೇವು. ಈಗ ಚುನಾವಣೆ ಮುಗಿದಿದ್ದು, ಫಲಿತಾಂಶ ಬರಬೇಕಿದೆ ಎಂದು ನಟ ಯಶ್ ಹೇಳಿದ್ದಾರೆ.

ನಾವು ನಟರು. ನಾವು ಜನರ ಆಸ್ತಿಯಾಗಿದ್ದೇವೆ. ನಮ್ಮನ್ನು ಟಾರ್ಗೆಟ್ ಮಾಡುವುದು ಅಷ್ಟು ಸುಲಭವಲ್ಲ. ನಮ್ಮನ್ನು ಟಾರ್ಗೆಟ್ ಮಾಡುವವರೇ ಬಹಳಷ್ಟು ಹುಷಾರಾಗಿ ಇರಬೇಕು ಎಂದು ನಟ ಯಶ್, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೆಸರು ಹೇಳದೇ ಟಾಂಗ್ ನೀಡಿದ್ದಾರೆ.

ಇನ್ನು ಚುನಾವಣೆಯಲ್ಲಿ ನಮ್ಮ ವಿರುದ್ಧ ಯಾವ ನಾಯಕರೇ ಹೇಳಿಕೆ ನೀಡಿರಲಿ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.

ನನ್ನ ವಿಚಾರಕ್ಕೆ ಯಾರೇ ಬಂದರೂ ಸುಮ್ಮನೇ ಇರೋದಂತೂ ಇಲ್ಲ ಅಂತ ರಾಕಿ ಬಾಯ್ ತಿರುಗೇಟು ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಡಿ.ಕೆ.ಶಿವಕುಮಾರ್ ತಮ್ಮ ಹೆಸರನ್ನು ಕೆಡಿ ಶಿವಕುಮಾರ್ ಅಂತ ಇಟ್ಟುಕೊಳ್ಳಬೇಕಿತ್ತು- ಈಶ್ವರಪ್ಪ ವ್ಯಂಗ್ಯ