Select Your Language

Notifications

webdunia
webdunia
webdunia
Saturday, 12 April 2025
webdunia

ಶ್ರೀಲಂಕಾ ಸ್ಪೋಟ ಪ್ರಕರಣ: ಜೆಡಿಎಸ್ ಮುಖಂಡರ ಪಾರ್ಥಿವ ಶರೀರ ಆಗಮನ

ಬಾಂಬ್
ಬೆಂಗಳೂರು , ಬುಧವಾರ, 24 ಏಪ್ರಿಲ್ 2019 (16:47 IST)
ಶ್ರೀಲಂಕಾದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ರಾಜ್ಯದ ಜೆಡಿಎಸ್ ನಾಯಕರ ಪಾರ್ಥೀವ ಶರೀರಗಳ ಆಗಮನವಾಗಿವೆ. ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿ ಆ ಬಳಿಕ ಮೃತರ ಕುಟುಂಬಗಳತ್ತ ಕರೆತರಲಾಯಿತು.
ಮೂರು ಪಾರ್ಥೀವ ಶರೀರ ಹೊತ್ತ ಇಂಡಿಗೋ 6E 1206 ವಿಮಾನ ಬೆಂಗಳೂರಿನತ್ತ ಬೆಳಗ್ಗೆ ಪ್ರಯಾಣ ಬೆಳೆಸಿತು.

ತುಮಕೂರು ನಿವಾಸಿ ರಮೇಶ್, ಅಡಕಮಾರನಹಳ್ಳಿ ನಿವಾಸಿ ಮಾರೇಗೌಡ, ಹಾರೋ ಕ್ಯಾತನಹಳ್ಳಿಯ ಪುಟ್ಟರಾಜ ( ನೆಲಮಂಗಲ) ಈ ಮೂವರು ಸಹ ಶ್ರೀಲಂಕಾ ಸರಣಿ ಬಾಂಬ್ ಬ್ಲಾಸ್ಟ್ ನಲ್ಲಿ ಮೃತರಾದವರಾಗಿದ್ದಾರೆ.

ಮೃತ ದೇಹಗಳನ್ನ ಸ್ವೀಕರಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಸಕಲ ಸಿದ್ಧತೆ ಕೈಗೊಂಡಿದ್ದರು. ಮೃತದೇಹಗಳನ್ನ ಕೊಂಡೊಯ್ಯಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು ಮಾಜಿ ಎಂಎಲ್ಸಿ ಇ.ಕೃಷ್ಣಪ್ಪ ಹಾಗೂ ಮೃತರ ಸಂಬಂಧಿಕರು.




Share this Story:

Follow Webdunia kannada

ಮುಂದಿನ ಸುದ್ದಿ

ಸ್ಟ್ರಾಂಗ್ ಅಭ್ಯರ್ಥಿಗಳ ಭವಿಷ್ಯ ರೂಮ್ ನಲ್ಲಿ ಭದ್ರ