ತಾಯಿ ಸತ್ತರೂ ವೋಟ್ ಹಾಕಿ ಮಾದರಿಯಾದ ಮಗ

ಮಂಗಳವಾರ, 23 ಏಪ್ರಿಲ್ 2019 (14:39 IST)
ಲೋಕಸಭೆ ಚುನಾವಣೆ 2ನೇ ಹಂತದ ಮತದಾನದಲ್ಲಿ ಹಲವು ವಿಶೇಷ ಘಟನೆಗಳ ನಡುವೆ ಮತದಾನ ಶುರುವಾಗಿದೆ.

ಹುಬ್ಬಳ್ಳಿಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ತಾಯಿಯ ಅಗಲಿಕೆಯ ನೋವಿನಲ್ಲಿಯೂ ಪುತ್ರ ಮತಕೇಂದ್ರಕ್ಕೆ ತೆರಳಿ ಮತದಾನ ಮಾಡುವ ಮೂಲಕ ತನ್ನ ಹಕ್ಕನ್ನು ಚಲಾಯಿಸಿದ್ದಾರೆ.

ಹುಬ್ಬಳ್ಳಿ ನಗರದ ಸಿ.ಎನ್.ನಾಯಕ, ಮಡಿವಾಳ ನಗರದ ನಿವಾಸಿಯಾಗಿದ್ದಾರೆ. ಅವರು ತಮ್ಮ ತಾಯಿಯ ಸಾವಿನ ನೋವನ್ನು ಮರೆತು ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತದಾನ ಮಾಡಿದ್ರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಸಂಸದ ಖರ್ಗೆ ದಂಪತಿಯಿಂದ ಮತಚಲಾವಣೆ