ಎಲೆಕ್ಷನ್ ಮರುದಿನವೇ ನಡೆಯಿತು ಯುವಕನ ಭಯಾನಕ ಕೊಲೆ

ಗುರುವಾರ, 25 ಏಪ್ರಿಲ್ 2019 (11:51 IST)
ಮತದಾನ ಮುಗಿದ ಮರುದಿನವೇ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಲಾಗಿದೆ.

ಮಾರಕಾಸ್ತ್ರಗಳಿಂದ ಹೊಡೆದು ಯುವಕನ ಬರ್ಬರ ಕೊಲೆ ಮಾಡಲಾಗಿದೆ.

ಕಲಬುರಗಿ ನಗರದ ಹೊರವಲಯದ ಹಾಗರಗಾ ರೋಡ್ ಬಳಿ ಘಟನೆ ನಡೆದಿದೆ. ಕಳೆದ ರಾತ್ರಿ ಬರ್ಬರ ಕೊಲೆ ಮಾಡಿರುವ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಪಯಾಜ್ ಶೇಕ್ 25 ಕೊಲೆಯಾದ ದುರ್ದೈವಿ. ಈತ ಕಲಬುರಗಿ ನಗರದ ಖಾಜಾ ಕಾಲೋನಿ ನಿವಾಸಿಯಾಗಿದ್ದನು.

ಇನ್ನಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಮ್ರಾನ್ ಮತ್ತು ಯಾಕೂಬ್ ಗಾಯಾಳುಗಳಾಗಿದ್ದಾರೆ.

ಪೀರ್ ಬಂಗಾಲ ದರ್ಗಾದಿಂದ ಮೂವರನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಅಬು ಮೌಲಾನ್ ಬ್ರದರ್ಸ್ ವಿರುದ್ಧ ಕೊಲೆ ಆರೋಪ ಕೇಳಿಬಂದಿದೆ. ಕೊಲೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಎಲೆಕ್ಷನ್ ಬಳಿಕ ಬೆಳಗಾವಿಗೆ ಭೇಟಿ ನೀಡಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು