ಬೈ ಎಲೆಕ್ಷನ್; ಕೈ ಟಿಕೆಟ್ ಫೈನಲ್ ನಾಳೆ

ಬುಧವಾರ, 24 ಏಪ್ರಿಲ್ 2019 (17:44 IST)
ರಾಜ್ಯದ ಎರಡು ವಿಧಾನಸಭೆ ಕ್ಷೇತ್ರಗಳ ಬೈ ಎಲೆಕ್ಷನ್ ಗೆ ಕಾಂಗ್ರೆಸ್ ನಾಳೆ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಲಿದೆ.

ಕುಂದಗೋಳ ಉಪಚುನಾವಣೆಗೆ ನಾಳೆ ಕಾಂಗ್ರೆಸ್ ಅಭ್ಯರ್ಥಿ ಫೈನಲ್ ಆಗಲಿದೆ. ಹೀಗಂತ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೆ ನೀಡಿದ್ದಾರೆ.

ಕುಂದಗೋಳ ವಿಧಾನಸಭೆ ಉಪಚುನಾವಣೆಗೆ ನಾಳೆಯೇ ಅಭ್ಯರ್ಥಿ ಫೈನಲ್ ಮಾಡಲಿದ್ದಾರೆ. ಶಿವಳ್ಳಿ ಕುಟುಂಬದವರಿಗೆ ಟಿಕೆಟ್ ಲಭಿಸಲಿದೆ.

ಕೆಲವರು ಅಪೇಕ್ಷಿತರಿದ್ದರೂ ಶಿವಳ್ಳಿ ಕುಟುಂಬದಲ್ಲೇ ಒಬ್ಬರಿಗೆ ಟಿಕೆಟ್ ಕೊಡಲಿದ್ದಾರೆ. ಅನುಕಂಪದ ಹಿನ್ನೆಲೆಯಲ್ಲಿ‌ ಅವರ ಮನೆಯವರಿಗೇ ಟಿಕೆಟ್ ಕೊಡಲಾಗುತ್ತದೆ ಎಂದು ಹೇಳಿದ್ರು.

ಇನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರಕ್ಕೂ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲಿದ್ದಾರೆ ವರಿಷ್ಠರು ಎಂದ್ರು.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೈತ್ರಿ ಅಭ್ಯರ್ಥಿ ಡೇರಿಗೆ ಹೋಗಿ ಮೇವು ಹಾಕಿದ್ಯಾಕೆ?