Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಮೈತ್ರಿ ಅಭ್ಯರ್ಥಿ ಡೇರಿಗೆ ಹೋಗಿ ಮೇವು ಹಾಕಿದ್ಯಾಕೆ?

webdunia
ಬುಧವಾರ, 24 ಏಪ್ರಿಲ್ 2019 (17:37 IST)
ಎದುರಾಳಿಯನ್ನು ಸೋಲಿಸಲೇಬೇಕು ಎಂದು ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ತಿರುಗಾಡಿ ಪ್ರಚಾರ ನಡೆಸಿ, ನಿನ್ನೆಯಷ್ಟೇ ಚುನಾವಣೆ ಮುಗಿಸಿದ್ದರು ಮೈತ್ರಿ ಅಭ್ಯರ್ಥಿ. ಆದರೆ ಇಂದು ಡೇರಿಗೆ ಹೋಗಿ ಮೇವು ಹಾಕಿದ್ದಾರೆ.

ರೈತ ಕುಟುಂಬದಿಂದ ಬಂದು, ರಾಜ್ಯ ರಾಜಕಾರಣದಲ್ಲಿ ಹೆಸರು ಮಾಡಿರುವ ವಿನಯ ಕುಲಕರ್ಣಿ ಇದೀಗ ರಾಷ್ಟ್ರ ರಾಜಕಾರಣದ ಚುನಾವಣೆಗೆ ಸ್ಪರ್ಧಿಸಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಧಾರವಾಡ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ವಿನಯ ಕುಲಕರ್ಣಿ, ಕಣಕ್ಕಿಳಿದಾಗಿನಿಂದ ಶತಾಯಗತಾಯ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರನ್ನು ಸೋಲಿಸಲೇಬೇಕು ಎಂದು ಕಾಲಿಗೆ ಗಾಲಿ ಕಟ್ಟಿಕೊಂಡವರಂತೆ ತಿರುಗಾಡಿ ಪ್ರಚಾರ ನಡೆಸಿದ್ರು.

ನಿನ್ನೆಯಷ್ಟೇ ಚುನಾವಣೆ ಮುಗಿಸಿದ್ದಾರೆ. ಲೋಕಸಭಾ ಕ್ಷೇತ್ರದ ಮತದಾರರ ಬಳಿ ಹೋಗಿ ಮತಯಾಚನೆ ಮಾಡಿ, ಸಾಕಷ್ಟು ಸಭೆ, ಸಮಾರಂಭಗಳನ್ನು ಮಾಡಿ 15-20 ದಿನ ವಿಶ್ರಾಂತಿ ಇಲ್ಲದೇ ಓಡಾಡಿದ ವಿನಯ್, ಇದೀಗ ಮತದಾನ ಮುಗಿಸಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಬೆಳಿಗ್ಗೆ ತಮ್ಮ ಮನೆಯಲ್ಲಿ ಮಕ್ಕಳೊಂದಿಗೆ ಕಾಲ ಕಳೆದರು. ನಂತರ ತಮ್ಮದೇ ಮಾಲೀಕತ್ವದ ವಿನಯ್ ಡೇರಿಗೆ ಹೋಗಿ ಅಲ್ಲಿರುವ ಜಾನುವಾರುಗಳಿಗೆ ಮೇವು ಹಾಕಿ, ಅವುಗಳ ಮೈ ತಿಕ್ಕಿ, ಸಣ್ಣ ಜಾನುವಾರುಗಳೊಂದಿಗೆ ಕಾಲ ಕಳೆದರು. ರೈತರಾಗಿರುವ ವಿನಯ ಕುಲಕರ್ಣಿ, ನಿನ್ನೆಯಷ್ಟೇ ಮತದಾನ ಪ್ರಕ್ರಿಯೆ ಮುಗಿಸಿ ಇಂದು ಡೇರಿಗೆ ಹೋಗಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು.ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಜಾರಕಿಹೊಳಿ ವಿರುದ್ಧ ಡಿಕೆಶಿ ಸಿಡಿಸಿದ್ರು ಹೊಸ ಬಾಂಬ್