ಜಾರಕಿಹೊಳಿ ವಿರುದ್ಧ ಡಿಕೆಶಿ ಸಿಡಿಸಿದ್ರು ಹೊಸ ಬಾಂಬ್

ಬುಧವಾರ, 24 ಏಪ್ರಿಲ್ 2019 (17:04 IST)
ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಜೀನಾಮೆ ಮುಂದಾಗಿರುವುದಕ್ಕೆ ಸಚಿವ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದ್ದಾರೆ.

ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ನಾಯಕರಿದ್ದಾರೆ, ಅವರು ಎಲ್ಲವನ್ನೂ ಗಮನಿಸುತ್ತಾರೆ. ಜಿಲ್ಲಾ ಉಸ್ತುವಾರಿ ಸಚಿವರಿದ್ದಾರೆ ಅವರು ಮಾತನಾಡ್ತಾರೆ. ನಾನು ಮನವೊಲಿಸೋಕೆ ಅವರು ಸಿಕ್ಕರೆ ತಾನೇ? ಎಂದು ಪ್ರಶ್ನಿಸಿದ್ರು.

ಅವರು ಸಿಕ್ಕರೆ ನಾನು ಅವರ ಜೊತೆ ಮಾತನಾಡುತ್ತೇನೆ. ಇಲ್ಲಿಯವರೆಗೆ ಅವರನ್ನ ಗೌರವದಿಂದ ಕಂಡಿದ್ದೇವೆ. ಪಕ್ಷ ಶಾಸಕ, ಸಚಿವ ಸ್ಥಾನ ಎಲ್ಲವನ್ನೂ ಅವರಿಗೆ ನೀಡಿದೆ. ಅವರಿಗೆ ಉಸಿರುಕಟ್ಟುವಂತೆ ಏನಾಗಿದೆಯೋ ಗೊತ್ತಿಲ್ಲ ಎಂದರು.

ಭಗವಂತ  ಅವರ ಆಸೆ ಈಡೇರಿಸುವಂತೆ ಮಾಡಲಿ ಎಂದು ಬೆಂಗಳೂರಿನಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ಚುನಾವಣೆ: ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದ ದೇವೇಗೌಡರು?