Select Your Language

Notifications

webdunia
webdunia
webdunia
webdunia

ಬಾಲ್ಯದ ಗೆಳೆಯನ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ದಂಪತಿ

ಬಾಲ್ಯದ ಗೆಳೆಯನ ಮದುವೆಗೆ ಬಂದ ರಾಕಿಂಗ್ ಸ್ಟಾರ್ ಯಶ್ ದಂಪತಿ
ಮೈಸೂರು , ಶುಕ್ರವಾರ, 13 ಮೇ 2022 (05:38 IST)
ಮೈಸೂರು: ಕೆಜಿಎಫ್ 2 ಸಕ್ಸಸ್ ಬಳಿಕ ಬಿಡುವಿನ ಖುಷಿಯಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಈಗ ಪತ್ನಿ ಸಮೇತ ಮದುವೆಯೊಂದಕ್ಕೆ ಆಗಮಿಸಿದ್ದಾರೆ.

ಮೈಸೂರಿನ ಕಲ್ಯಾಣಮಂಟಪವೊಂದರಲ್ಲಿ ನಿನ್ನೆ ರಾತ್ರಿ ನಡೆದ ಮದುವೆ ಕಾರ್ಯಕ್ರಮಕ್ಕೆ ಯಶ್-ರಾಧಿಕಾ ಆಗಮಿಸಿ ವಧು-ವರರಿಗೆ ಶುಭ ಕೋರಿದರು. ಯಶ್ ಬಾಲ್ಯದ ಸ್ನೇಹಿತ ಚೇತನ್ ಮದುವೆ ಇಲ್ಲಿ ನಿಗದಿಯಾಗಿತ್ತು.

ಈ ಮದುವೆ ಸಮಾರಂಭಕ್ಕೆ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಕೂಡಾ ಆಗಮಿಸಿದ್ದರು. ಯಶ್-ರಾಧಿಕಾ ಮದುವೆ ಮನೆಗೆ ಆಗಮಿಸುತ್ತಿದ್ಧಂತೇ ಜನ ಅವರನ್ನು ನೋಡಲು ನೂಕು ನುಗ್ಗಲು ನಡಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಆಚಾರ್ಯ ಸಿನಿಮಾದಿಂದಾದ ನಷ್ಟ ಭರ್ತಿ ಮಾಡಲಿರುವ ರಾಮ್ ಚರಣ್?