ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೊಬ್ಬ ಪುತ್ರ ವಿಕ್ರಮ್ ತ್ರಿವಿಕ್ರಮ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿದ್ದಾರೆ.
ಇದೀಗ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿರುವ ಪುತ್ರನಿಗೆ ಸ್ವತಃ ಕ್ರೇಜಿಸ್ಟಾರ್ ರವಿಚಂದ್ರನ್ ಸ್ವಾಗತ ಕೋರುವುದರ ಜೊತೆಗೆ ಶುಭ ಹಾರೈಸಿದ್ದಾರೆ. ಮಗನಿಗೆ ನಿಮ್ಮೆಲ್ಲರ ಆಶೀರ್ವಾದವಿರಲಿ ಎಂದು ಅಭಿಮಾನಿಗಳನ್ನು ಕೇಳಿಕೊಂಡಿದ್ದಾರೆ.
ರವಿಚಂದ್ರನ್ ಇನ್ನೊಬ್ಬ ಪುತ್ರ ಮನೋರಂಜನ್ ಈಗಾಗಲೇ ಬೆಳ್ಳಿ ತೆರೆಗೆ ಲಾಂಚ್ ಆಗಿದ್ದರು. ಇದೀಗ ಮತ್ತೊಬ್ಬ ಪುತ್ರನ ಸರದಿ. ಈ ಸಿನಿಮಾ ಜೂನ್ 24 ರಂದು ತೆರೆಗೆ ಬರಲಿದೆ.