ಬೆಂಗಳೂರು: ಕಿಚ್ಚ ಸುದೀಪ್ ತಮ್ಮ ಮುಂಬರುವ ಸಿನಿಮಾ ವಿಕ್ರಾಂತ್ ರೋಣ ಬಗ್ಗೆ ಮತ್ತೊಂದು ಅಪ್ ಡೇಟ್ ಕೊಟ್ಟಿದ್ದಾರೆ.
ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕರು ಇನ್ಮೇಲೆ ಪ್ರತಿ ದಿನ ಎಂಬಂತೆ ಹೊಸ ಅಪ್ ಡೇಟ್ ಕೊಡುತ್ತಲೇ ಇರುತ್ತೇವೆ ಎಂದಿದ್ದರು. ಅದರಂತೆ ಈಗ ನಡೆದುಕೊಂಡಿದ್ದಾರೆ.
ಮೇ 16 ಕ್ಕೆ ಚಿತ್ರದ ಬಗ್ಗೆ ಮತ್ತೊಂದು ಪ್ರಕಟಣೆ ನೀಡಲಿದ್ದೇವೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಮೂಲಗಳ ಪ್ರಕಾರ ಮೊದಲ ಹಾಡು ಬಿಡುಗಡೆ ಬಗ್ಗೆ ಈ ದಿನ ಮಾಹಿತಿ ನೀಡಲಾಗುತ್ತದೆ ಎನ್ನಲಾಗಿದೆ. ವಿಕ್ರಾಂತ್ ರೋಣ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ.