ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮಿಬ್ಬರು ಮಕ್ಕಳೊಂದಿಗೆ ಆಟವಾಡುವ ಫನ್ನಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು ಎಲ್ಲರ ಮುಖದಲ್ಲಿ ನಗು ಮೂಡಿಸಿದೆ.
ಮಕ್ಕಳೊಂದಿಗೆ ಸಮಯ ಸಿಕ್ಕಾಗಲೆಲ್ಲಾ ಆಟವಾಡುತ್ತಾ ತಾವೊಬ್ಬ ಪಕ್ಕಾ ಫ್ಯಾಮಿಲಿ ಮ್ಯಾನ್ ಎಂದು ಯಶ್ ಆಗಾಗ ನಿರೂಪಿಸುತ್ತಾರೆ.
ಇದೀಗ ಮಗ ಯಥರ್ವ್ ಹಾಗೂ ಮಗಳು ಐರಾ ಜೊತೆ ಆಡುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಯಥರ್ವ್ ನಾನು ಡೈನಾಸರ್ ಎನ್ನುತ್ತಾನೆ. ಇದಕ್ಕೆ ಯಶ್ ನಾನೀಗ ಟೈಗರ್ ಆಗ್ತೀನಿ ಎಂದು ಹುಲಿಯ ಧ್ವನಿ ಅನುಕರಣೆ ಮಾಡುತ್ತಾರೆ. ಇದನ್ನು ನೋಡಿ ಯಥರ್ವ್ ಭಯ ಬಿದ್ದು ಓಡಿ ಹೋಗುತ್ತಾನೆ. ಈ ತಮಾಷೆಯ ವಿಡಿಯೋವನ್ನು ನೆಟ್ಟಿಗರು ಭಾರೀ ಲೈಕ್ ಮಾಡಿದ್ದಾರೆ.