ಬೆಂಗಳೂರು: ಬಿಬಿಎಂಪಿ ಮಾಡುವ ಎಡವಟ್ಟಿನಿಂದ ಖ್ಯಾತ ಗಾಯಕ ಅಜಯ್ ವಾರಿಯರ್ ಅಪಾಯಕ್ಕೆ ಸಿಲುಕಿದ್ದಾರೆ.
ಕಳೆದ ಭಾನುವಾರ ವಾಕಿಂಗ್ ಹೋಗುವಾಗ ಅಜಯ್ ವಾರಿಯರ್ ಮ್ಯಾನ್ ಹೋಲ್ ಗೆ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಈ ವಿಚಾರವನ್ನು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಭಾರೀ ಮಳೆಯಿಂದಾಗಿ ತೆರೆದ ಮ್ಯಾನ್ ಹೋಲ್ ಗಮನಿಸದೇ ಬಿದ್ದಿದ್ದೆ. ಅದೃಷ್ಟವಶಾತ್ ಪ್ರಾಣ ಉಳಿಯಿತು. ಆದರೆ ಕಾಲಿಗೆ ಪೆಟ್ಟಾಗಿತ್ತು. ಘಟನೆ ಬಳಿಕ ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ಸರಿಯಾದ ಪ್ರತಿಕ್ರಿಯೆ ಬರಲಿಲ್ಲ. ಇಂತಹ ದುರ್ವ್ಯವಸ್ಥೆಗೆ ಯಾರನ್ನು ದೂರಬೇಕು? ಎಂದು ಅಜಯ್ ವಾರಿಯರ್ ಹೇಳಿದ್ದಾರೆ.