ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಥ್ರಿಲ್ಲರ್ ಸಿನಿಮಾ ವಿಕ್ರಾಂತ್ ರೋಣ ಬಗ್ಗೆ ಸದ್ಯದಲ್ಲೇ ಅಭಿಮಾನಿಗಳಿಗೆ ಹೊಸ ಸುದ್ದಿ ಸಿಗಲಿದೆ.
ಜುಲೈ 28 ರಂದು ಸಿನಿಮಾ ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ಸಾಗರೋತ್ತರ ವಿತರಣೆ ಹಕ್ಕು ದಾಖಲೆಯ ಮೊತ್ತಕ್ಕೆ ಮಾರಾಟವಾಗಿ ವಿಕ್ರಾಂತ್ ರೋಣ ಸುದ್ದಿಯಾಗಿತ್ತು.
ಮುಂದಿನ ವಾರ ಸಿನಿಮಾ ಬಗ್ಗೆ ಮತ್ತೊಂದು ಬಿಗ್ ಅಪ್ ಡೇಟ್ ಸಿಗಲಿದ್ದು, ಅದಾದ ಬಳಿಕ ವಿಕ್ರಾಂತ್ ರೋಣ ಬಗ್ಗೆ ದಿನಕ್ಕೊಂದರಂತೆ ಹೊಸ ಸುದ್ದಿ ಕೊಡುವುದಾಗಿ ಚಿತ್ರತಂಡ ಹೇಳಿದೆ.