Publish Date: Thu, 12 May 2022 (09:30 IST)
Updated Date: Thu, 12 May 2022 (09:34 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಚಾರ್ಲಿ 777 ಸಿನಿಮಾ ಬಗ್ಗೆ ಆಸಕ್ತಿ ತೋರಿಸಿದ್ದ ರಮ್ಯಾ ಈಗ ಅವರ ಜೊತೆ ನಟಿಸಲೂ ರೆಡಿ ಎಂದಿದ್ದಾರೆ.
ರಕ್ಷಿತ್ ಶೆಟ್ಟಿ ಸಂದರ್ಶನವೊಂದರಲ್ಲಿ ರಮ್ಯಾ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ರಕ್ಷಿತ್ ನಾನು ಇದುವರೆಗೆ ಅವರನ್ನು ಭೇಟಿಯಾಗಿಲ್ಲ. ಹಾಗಿದ್ದರೂ ಅವರು ನನ್ನ ಕ್ರಶ್. ಆವತ್ತಿಂದ ಈವರೆಗೂ ರಮ್ಯಾ ಎಂದರೆ ನನಗೆ ಏನೋ ಒಂದು ರೀತಿಯ ಅಭಿಮಾನ. ರಮ್ಯಾ ಜೊತೆ ನಟಿಸಲು ಅವಕಾಶವಿರುವಂತಹ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ ಎಂದಿದ್ದರು.
ಈ ವಿಡಿಯೋ ಶೇರ್ ಮಾಡಿರುವ ರಮ್ಯಾ, ಯೆ..ಸ್... ರಕ್ಷಿತ್ ಶೆಟ್ಟಿ ನಾನು ರೆಡಿ ಎಂದಿದ್ದಾರೆ. ಹೀಗಾಗಿ ಮುಂದೊಂದು ದಿನ ಇಬ್ಬರನ್ನೂ ತೆರೆ ಮೇಲೆ ಜೊತೆಯಾಗಿ ನೋಡಿದರೂ ಅಚ್ಚರಿಯಿಲ್ಲ.