ಬೆಂಗಳೂರು: ಸಿನಿ ಪ್ರಿಯರಿಗೆ ಇಂದಿನ ಶುಕ್ರವಾರ ನಿಜಕ್ಕೂ ಹಬ್ಬ. ಇಂದು ಥಿಯೇಟರ್ ಮತ್ತು ಒಟಿಟಿಯಲ್ಲಿ ಅತ್ಯುತ್ತಮ ಸಿನಿಮಾ ರಿಲೀಸ್ ಆಗುತ್ತಿದೆ.
ಹಿರಿಯ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದ 50 ನೇ ಸಿನಿಮಾ, ಸಾನ್ವಿ ಶ್ರೀವಾಸ್ತವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಸ್ತೂರಿಮಹಲ್ ಸಿನಿಮಾ ಇಂದು ಥಿಯೇರ್ ನಲ್ಲಿ ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಸೃಜನ್ ಲೋಕೇಶ್ –ಮೇಘನಾ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೆಲ್ಫೀ ಮಮ್ಮೀ ಗೂಗಲ್ ಡ್ಯಾಡೀ ಸಿನಿಮಾ ಇಂದೇ ಥಿಯೇಟರ್ ನಲ್ಲಿ ಬಿಡುಗಡೆಯಾಗಲಿದೆ. ತಬಲಾನಾಣಿ ಪ್ರಮುಖ ಪಾತ್ರದಲ್ಲಿರುವ ಕ್ರಿಕೆಟ್ ಬೆಟ್ಟಿಂಗ್ ಕುರಿತಾದ ಮನರಂಜನಾ ಸಿನಿಮಾ ಕ್ರಿಟಿಕಲ್ ಕೀರ್ತನೆಗಳು ಇಂದು ರಿಲೀಸ್ ಆಗುತ್ತಿದೆ.