ಹೈದರಾಬಾದ್ : ಗೀತಾ ಗೋವಿಂದಂ ಖ್ಯಾತಿಯ ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಂಬೈನ ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.
ಗೀತಾ ಗೋವಿಂದಂ ಚಿತ್ರದ ಬಳಿಕ ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ಮಂದಣ್ಣ ಪರಸ್ಪರ ಡೇಟಿಂಗ್ ಮಾಡುವ ವದಂತಿಗಳು ಕೇಳಿಬಂದಿದ್ದವು. ಆದರೆ ಇದೀಗ ವಿಜಯ್ ದೇವರ ಕೊಂಡ ಮತ್ತು ರಶ್ಮಿಕಾ ಮಂದಣ್ಣ ಮುಂಬೈನಲ್ಲಿ ನೆಲೆಸಿದ್ದು, ಬಾಂದ್ರಾದಲ್ಲಿರುವ ರೆಸ್ಟೋರೆಂಟ್ ನಲ್ಲಿ ಜೊತೆಯಾಗಿ ಕುಳಿತು ಡಿನ್ನರ್ ಮಾಡಿದ್ದಾರೆ.
ರೆಸ್ಟೋರೆಂಟ್ ನಿಂದ ಹೊರಗೆ ಬರುವಾಗ ರಶ್ಮಿಕಾ ಮಂದಣ್ಣ ಬಿಳಿ ಹೂಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದು, ಇದಕ್ಕೆ ಸಂಬಂಧಪಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಿಡುವಿಲ್ಲದ ಸಮಯದ ನಡುವೆಯೂ ಇವರ ಈ ಭೇಟಿ ಅಭಿಮಾನಿಗಳಲ್ಲಿ ಕುತೂಹಲವನ್ನುಂಟು ಮಾಡಿದೆ.