Select Your Language

Notifications

webdunia
webdunia
webdunia
webdunia

ಮತ್ತೆ ಲಾಕ್ ಡೌನ್ ಆಗೋ ಹಾಗೆ ಮಾಡ್ಬೇಡಿ: ಕೈಮುಗಿದು ಕೇಳಿದ ಶಿವರಾಜ್ ಕುಮಾರ್

ಮತ್ತೆ ಲಾಕ್ ಡೌನ್ ಆಗೋ ಹಾಗೆ ಮಾಡ್ಬೇಡಿ: ಕೈಮುಗಿದು ಕೇಳಿದ ಶಿವರಾಜ್ ಕುಮಾರ್
ಬೆಂಗಳೂರು , ಶುಕ್ರವಾರ, 26 ಮಾರ್ಚ್ 2021 (11:46 IST)
ಬೆಂಗಳೂರು: ಕೊರೋನಾ ಎರಡನೇ ಅಲೆ ಗಂಭೀರವಾಗಿರುವ ಹಿನ್ನಲೆಯಲ್ಲಿ ನಟ ಶಿವರಾಜ್ ಕುಮಾರ್ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.


‘ನಿಮಗೆಲ್ಲಾ ಗೊತ್ತೇ ಇದೆ. ದಯವಿಟ್ಟು ನಿಮಗೆ ಕೈ ಮುಗಿದು ಕೇಳಿಕೊಳ್ತಾ ಇದ್ದೀನಿ. ಕೊರೋನಾ ಎರಡನೇ ಅಲೆ ಬರುತ್ತಾ ಇದೆ. ಮತ್ತೆ ಲಾಕ್ ಡೌನ್ ಆಗುವ ಪರಿಸ್ಥಿತಿ ತಂದುಕೊಳ್ಳುವುದು ಬೇಡ. ನಾವೆಲ್ಲರೂ ಮಾಸ್ಕ್ ಹಾಕಿ, ಸ್ಯಾನಿಟೈಸ್ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ. ನೀವೆಲ್ಲರೂ ಫಾಲೋ ಮಾಡ್ತೀರಿ ಅಂತ ನಂಬಿದ್ದೀನಿ’ ಎಂದು ಶಿವಣ್ಣ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಸಂದೇಶ ನೀಡಿದ್ದಾರೆ.

ಇತ್ತೀಚೆಗಷ್ಟೇ ಆರೋಗ್ಯ ಸಚಿವ ಡಾ. ಸುಧಾಕರ್ ಚಿತ್ರನಟರೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸಲು ಸಹಕರಿಸಬೇಕು ಎಂದು ಮನವಿ ಮಾಡಿದ್ದರು. ಅದರಂತೆ ಶಿವಣ್ಣ ತಮ್ಮ ಅಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಾಜಲ್ ಗೆ ವಿಶೇಷ ಉಡುಗೊರೆ ನೀಡಿದ ಪತಿ ಗೌತಮ್ ಕಿಚ್ಲು