Publish Date: Fri, 26 Mar 2021 (10:26 IST)
Updated Date: Fri, 26 Mar 2021 (10:27 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಟ ನಾಗಾರ್ಜುನ್ ಅವರು ಡಿಜಿಟಲ್ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಈಗ ಮೂರು ವೆಬ್ ಆಧಾರಿತ ಯೋಜನೆಗಳನ್ನು ಪರಿಗಣಿಸುತ್ತಿದ್ದೇನೆ. ನಾನು ಅವುಗಳಲ್ಲಿ ಕೆಲಸ ಮಾಡಬೇಕು. ಕೆಲವು ಕಥೆಗಳನ್ನು ಕೇವಲ 2 ಗಂಟೆಗಳಲ್ಲಿ ಹೇಳಲಾಗುವುದಿಲ್ಲ. ಆದ್ದರಿಂದ ಈ ಚಲನಚಿತ್ರಗಳಿಗೆ ವೆಬ್ ಸರಣಿಯಂತಹ ಸ್ವಲ್ಪ ಸ್ಥಳಾವಕಾಶ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ನಾಗಾರ್ಜುನ್ ಅವರು ವೆಬ್ ಸರಣಿಗಾಗಿ ನೈಟ್ ಫ್ಲಿಕ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮತ್ತು ಅದರ ವಿವರ ಶೀಘ್ರದಲ್ಲಿಯೇ ಹೊರಬೀಳಲಿದೆ ಎನ್ನಲಾಗಿದೆ.