Publish Date: Fri, 26 Mar 2021 (10:23 IST)
Updated Date: Fri, 26 Mar 2021 (10:24 IST)
ಚೆನ್ನೈ : ನಿರ್ಮಾಪಕ ವಿಘ್ನೇಶ್ ಶಿವನ್ ಹಾಗೂ ನಟಿ ನಯನತಾರಾ ಇಬ್ಬರು ಪ್ರೀತಿಸುತ್ತಿರುವ ವಿಚಾರ ಎಲ್ಲರಿಗೂ ತಿಳಿದೆ ಇದೆ. ಆದರೆ ಇದೀಗ ಅವರಿಬ್ಬರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು. ವಿಘ್ನೇಶ್ ಶಿವನ್ ಹಾಗೂ ನಯನತಾರಾ ಸೋಶಿಯಲ್ ಮೀಡಿಯಾದಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಅವರು ಉಂಗುರ ತೋರಿಸುತ್ತಿದ್ದಾರೆ. ನಯನತಾರಾ ಶಿವನ್ ಎದೆಯ ಮೇಲೆ ಕೈ ಇಟ್ಟು ಉಂಗುರ ತೋರಿಸುತ್ತಿದ್ದಾರೆ. ಹಾಗಾಗಿ ಅಭಿಮಾನಿಗಳು ಅವರಿಬ್ಬರಿಗೂ ನಿಶ್ಚಿತಾರ್ಥವಾಗಿದೆಯೇ ಎಂದು ಕೇಳಲು ಶುರು ಮಾಡಿದ್ದಾರೆ ಎನ್ನಲಾಗಿದೆ.
2015ರಲ್ಲಿ ಬಿಡುಗಡೆಯಾದ ನಾನಮ್ ರೌಡಿಧಾನ್ ಚಿತ್ರದಲ್ಲಿ ಒಟ್ಟಿಗೆ ಕೆಲಸಮಾಡುವಾಗ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರ ನಡುವೆ ಪ್ರೀತಿ ಚಿಗುರಿದೆ ಎನ್ನಲಾಗಿದೆ.