Select Your Language

Notifications

webdunia
webdunia
webdunia
webdunia

ನಟ ವಿಜಯ್ 65 ನೇ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ನಟಿ

ನಟ ವಿಜಯ್ 65 ನೇ ಚಿತ್ರದಲ್ಲಿ ನಟಿಸಲಿದ್ದಾರಂತೆ ಈ ನಟಿ
ಚೆನ್ನೈ , ಗುರುವಾರ, 25 ಮಾರ್ಚ್ 2021 (10:52 IST)
ಚೆನ್ನೈ : ಕೋಲಮಾವು ಕೀಕಿಲಾ ಮತ್ತು ಡಾಕ್ಟರ್ ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದಲ್ಲಿ ನಟ ವಿಜಯ್ ಅವರ 65 ನೇ ಚಿತ್ರ ಮೂಡಿಬರಲಿದೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ.

ಈ ಚಿತ್ರದಲ್ಲಿ ನಾಯಕಿಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದೀಗ ನಟಿ ಪೂಜಾ ಹೆಗ್ಡೆ  ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರಂತೆ. ಈ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಆ ಮೂಲಕ ಪೂಜಾ ಹೆಗ್ಡೆ ಮತ್ತೆ ತಮಿಳಿಗೆ ಹಿಂತಿರುಗಿದ್ದಾರೆ ಎನ್ನಲಾಗಿದೆ.

ವಿಜಯ್ 65ನೇ ಚಿತ್ರದಲ್ಲಿ ಅನಿರುದ್ಧ್ ಸಂಗೀತ ಮತ್ತು ಮನೋಜ್ ಪರಮಹಂಸ ಅವರ ಛಾಯಾಗ್ರಹಣವಿದೆ. ಹಾಗೇ ಈ ಚಿತ್ರದ ಪಾತ್ರವರ್ಗವನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ದಿವ್ಯಾ ಜೊತೆಗಿನ ಪ್ರೀತಿ ವಿಚಾರ ಬಹಿರಂಗಪಡಿಸಿದ ಅರವಿಂದ್