Select Your Language

Notifications

webdunia
webdunia
webdunia
webdunia

ಪುಷ್ಪಾ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?

ಪುಷ್ಪಾ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?
ಹೈದರಾಬಾದ್ , ಬುಧವಾರ, 24 ಮಾರ್ಚ್ 2021 (11:21 IST)
ಹೈದರಾಬಾದ್ : ಅಲ್ಲು ಅರ್ಜುನ್ ಮುಂಬರುವ ಬಹುನಿರೀಕ್ಷೆಯ ಚಿತ್ರ ‘ಪುಷ್ಪಾ’ ಚಿತ್ರದಲ್ಲಿ ಮಲಯಾಳಂ ಸೂಪರ್ ‍ಸ್ಟಾರ್ ಫಹಾದ್ ಫಾಸಿಲ್ ಖಳನಾಯಕನಾಗಿ ನಟಿಸಲಿದ್ದಾರೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಆದರೆ ಅವರಿಗಿಂತಲೂ ಮೊದಲು ಈ ಪಾತ್ರವನ್ನು ಕಾಲಿವುಡ್ ನಟರೊಬ್ಬರರಿಗೆ ನೀಡಲಾಗಿತ್ತು ಎನ್ನಲಾಗಿದೆ.

ಹೌದು. ಕಾಲಿವುಡ್ ನಟ ವಿಜಯ್ ಸೇತುಪತಿ ಅವರು ಈ ಚಿತ್ರದಲ್ಲಿ ಖಳನಾಯಕನ ಪಾತ್ರಕ್ಕೆ ಮೊದಲು ಆಯ್ಕೆಯಾಗಿದ್ದರು. ಆದರೆ ವಿಜಯ್ ಸೇತುಪತಿ ಅವರು ಹೆಚ್ಚಿನ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಾತ್ರವನ್ನು ಫಹಾದ್ ಫಾಸಿಲ್ ನೀಡಲಾಗಿದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ವಿಜಯ್ ಸೇತುಪತಿ ಅವರು 2 ದೊಡ್ಡ ಬೇಡಿಕೆಗಳನ್ನು ಇಟ್ಟಿದ್ದರಂತೆ. ಮೊದಲನೇಯದಾಗಿ ಚಿತ್ರಕ್ಕಾಗಿ 10 ಕೋಟಿ ಸಂಭಾವನೆ ಕೇಳಿದ್ದಾರಂತೆ. ಅಲ್ಲದೇ ಪುಷ್ಪಾ ಚಿತ್ರವನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಬಾರದು. ತಮಿಳುನಾಡಿನಲ್ಲಿ ಚಿತ್ರದ ಹಕ್ಕುಗಳನ್ನು ತಮ್ಮ ಸಂಭಾವನೆಯಾಗಿ ನೀಡಬೇಕೆಂದು ಹೇಳಿದ್ದಾರಂತೆ. ಹಾಗಾಗಿ ನಿರ್ಮಾಪಕರು ಅವರ ಬದಲು ಬೇರೆ ನಟನನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಲ್ಲಿನವರ ಆತಿಥ್ಯ ನನಗೆ ಖುಷಿಕೊಡುತ್ತದೆ: ಹರಿಪ್ರಿಯಾ ಹೀಗೆ ಹೇಳಿದ್ದು ಯಾರ ಬಗ್ಗೆ?