Select Your Language

Notifications

webdunia
webdunia
webdunia
webdunia

‘ರಂಗ್ ದೇ’ ಚಿತ್ರದಲ್ಲಿ ನಗ್ನ ದೃಶ್ಯದಲ್ಲಿ ನಟಿಸಿದ ನಟ

‘ರಂಗ್ ದೇ’ ಚಿತ್ರದಲ್ಲಿ ನಗ್ನ ದೃಶ್ಯದಲ್ಲಿ ನಟಿಸಿದ ನಟ
ಹೈದರಾಬಾದ್ , ಬುಧವಾರ, 24 ಮಾರ್ಚ್ 2021 (09:50 IST)
ಹೈದರಾಬಾದ್ : ನಿತಿನ್ ಮತ್ತು ಕೀರ್ತಿ ಸುರೇಶ್ ಅವರು ಮುಂಬರುವ ರೊಮ್ಯಾಂಟಿಕ್ ಮತ್ತು ಹಾಸ್ಯ ಚಿತ್ರ ‘ರಂಗ್ ದೇ’ ಯಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಚಿತ್ರದಲ್ಲಿ ನಗ್ನ ದೃಶ್ಯವೊಂದನ್ನು ಚಿತ್ರೀಕರಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಮಾರ್ಚ್ 26ರಂದು ಈ ಚಿತ್ರ ಬಿಡುಗಡೆಯಾಗಲಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ. ಹಾಗೂ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಅಲ್ಲದೇ ಇತ್ತೀಚೆಗೆ ಈ ಚಿತ್ರದ ಬಗ್ಗೆ ಸಂದರ್ಶನ ನಡೆಸಲಾಗಿದ್ದು, ಆ ವೇಳೆ ನಟ ವೆನ್ನೆಲಾ  ಕಿಶೋರ್ ಅವರು ತಾವು ಈ ಚಿತ್ರದಲ್ಲಿ ನಗ್ನ ದೃಶ್ಯದಲ್ಲಿ ನಟಿಸಿರುವುದಾಗಿ ತಿಳಿಸಿ ಪ್ರೇಕ್ಷರಿಗೆ ಶಾಕ್ ನೀಡಿದ್ದಾರೆ.

ಆದರೆ ಅದನ್ನು ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ  ಇದರಿಂದ ಪ್ರೇಕ್ಷಕರಿಗೆ ಅಹಿತಕರ ಅನಿಸುವುದಿಲ್ಲ. ಆ ದೃಶ್ಯವನ್ನು ಸೆನ್ಸಾರ್ ಮಂಡಳಿ ಡಿಲೀಟ್ ಮಾಡಲಿಲ್ಲ ಎಂದು ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಡಬ್ಬಿಂಗ್ ಶುರುಮಾಡಿದ ರಾಕಿಂಗ್ ಸ್ಟಾರ್ ಯಶ್