Select Your Language

Notifications

webdunia
webdunia
webdunia
webdunia

ಸೋಶಿಯಲ್ ಮೀಡಿಯಾದಲ್ಲಿ ಫೋಟೊದ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ನಟಿ ಕಾಜಲ್

ಸೋಶಿಯಲ್ ಮೀಡಿಯಾದಲ್ಲಿ  ಫೋಟೊದ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ನಟಿ ಕಾಜಲ್
ಹೈದರಾಬಾದ್ , ಮಂಗಳವಾರ, 23 ಮಾರ್ಚ್ 2021 (08:52 IST)
ಹೈದರಾಬಾದ್ : ನಟಿ ಕಾಜಲ್ ಅವರು ಮಣಿಕಟ್ಟನ್ನು ಕೆಂಪು ಬಟ್ಟೆಯಿಂದ ಸುತ್ತಿ ತನ್ನ ಹೆಬ್ಬೆರಳನ್ನು ತೋರಿಸುತ್ತಿರುವ ಫೋಟೊವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವುದರ ಮೂಲಕ ಅಭಿಮಾನಿಗಳ ಕುತೂಹಲವನ್ನು ಹೆಚ್ಚಿಸಿದ್ದಾರೆ.

ಹೌದು . ನಟಿ ಕಾಜಲ್ ಅವರು ಇದೀಗ  ಈ ಪೋಟೊವನ್ನು ಅಪ್ ಲೋಡ್ ಮಾಡಿ “ ನನ್ನ ಅತ್ಯಂತ ನೆಚ್ಚಿನ ವ್ಯಕ್ತಿಯೊಂದಿಗೆ ಶೂಟಿಂಗ್. ಯಾರೆಂದು ಊಹಿಸಿ” ಎಂದು ಬರೆದಿದ್ದಾರೆ.  ಸದ್ಯ ಅವರು ‘ಆಚಾರ್ಯ ‘ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಅಲ್ಲದೇ ಇತ್ತೀಚೆಗೆ ರಾಮ್ ಚರಣ್ ಅವರು ಆಚಾರ್ಯ ಚಿತ್ರದ ಇದೇ ರೀತಿಯ ಫೋಟೊವೊಂದನ್ನು ಹಂಚಿಕೊಂಡಿದ್ದರು. ಹಾಗಾಗಿ ಅಭಿಮಾನಿಗಳು ಚಿರಂಜೀವಿ ಎಂದು ಹೇಳುತ್ತಿದ್ದಾರೆ.

ಹಾಗೇ ಇನ್ನೂ ಕೆಲವರು ಕಾಜಲ್ ನಾಗಾರ್ಜುನ್ ಅವರೊಂದಿಗೆ ಚಿತ್ರದಲ್ಲಿ ನಟಿಸುತ್ತಿದ್ದರಿಂದ ಇದು ನಾಗಾರ್ಜುನ್ ಅವರು ಎನ್ನಲಾಗಿದೆ. ಆದರೆ ಅದು ಯಾರೆಂಬುದನ್ನು ನಟಿ ತಿಳಿಸಿಲ್ಲ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಾಜಿ ಗಣೇಶನ್ ಮನೆಗೆ ಭೇಟಿ ನೀಡಿದ ನಟಿ ಖುಷ್ಬೂ