Select Your Language

Notifications

webdunia
webdunia
webdunia
webdunia

ಶಿವಾಜಿ ಗಣೇಶನ್ ಮನೆಗೆ ಭೇಟಿ ನೀಡಿದ ನಟಿ ಖುಷ್ಬೂ

ಶಿವಾಜಿ ಗಣೇಶನ್ ಮನೆಗೆ ಭೇಟಿ ನೀಡಿದ ನಟಿ ಖುಷ್ಬೂ
ಚೆನ್ನೈ , ಸೋಮವಾರ, 22 ಮಾರ್ಚ್ 2021 (12:06 IST)
ಚೆನ್ನೈ : ಹಲವಾರು ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದ ನಟಿ ಖುಷ್ಬು ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಅವರು ಚೆನ್ನೈನ ಸಾವಿರ ದೀಪಗಳ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ.

ಈ ನಡುವೆ ನಟಿ ಖುಷ್ಬೂ ಅವರು ನಟ ಶಿವಾಜಿ ಗಣೇಶನ್ ಅವರ ಮನೆಗೆ ಹಠಾತ್ ಭೇಟಿ ನೀಡಿ ಅವರ ಕುಟುಂಬದವರ ಜೊತೆ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೊದ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಸ್ವಾಗತ ಮತ್ತು ಆತಿಥ್ಯಕ್ಕೆ ಧನ್ಯವಾದ ಎಂದು ತಿಳಿಸಿದ್ದಾರೆ.

ರಾಮ್ ಕುಮಾರ್ ಗಣೇಶನ್ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ನಿಟ್ಟಿನಲ್ಲಿ ನಟಿ ಖುಷ್ಬೂ ಅವರ ಮನೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್ ವೇಳೆ ಈ ಕಾರಣಕ್ಕೆ ಜನರ ನಡುವೆ ವಾಗ್ದಾದಕ್ಕೀಳಿದ ನಟ ವಿಜಯ್ ಸೇತುಪತಿ