Publish Date: Fri, 19 Mar 2021 (09:03 IST)
Updated Date: Fri, 19 Mar 2021 (09:05 IST)
ನವದೆಹಲಿ: ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಿಸುವ ವಿಚಾರದಲ್ಲಿ ಹೋರಾಟವನ್ನೇ ಮಾಡಿದ್ದ ಬಿಜೆಪಿಗೆ ಈಗ ರಾಮಚಂದ್ರನೇ ಸೇರಿದ್ದಾನೆ!
ಅಷ್ಟಕ್ಕೂ ಈ ರಾಮಚಂದ್ರ ಭಗವಂತನಲ್ಲ. ದೂರದರ್ಶನ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಧಾರವಾಹಿ ರಾಮಾಯಣದಲ್ಲಿ ಶ್ರೀರಾಮ ಚಂದ್ರನ ಪಾತ್ರ ಮಾಡುತ್ತಿದ್ದ ಅರುಣ್ ಗೊವಿಲ್. ಅವರೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ದೆಹಲಿಯಲ್ಲಿ ನಿನ್ನೆ ಪಕ್ಷದ ಕಚೇರಿಯಲ್ಲಿ ಅರುಣ್ ಗೊವಿಲ್ ಬಿಜೆಪಿ ಸೇರಿದ್ದಾರೆ. ಉತ್ತರ ಪ್ರದೇಶದ ಮೀರತ್ ನವರಾಗಿರುವ ಅರುಣ‍್ 1980 ರ ಕಾಲದಲ್ಲಿ ರಾಮಾಯಣ ಧಾರವಾಹಿ ಮೂಲಕ ಖ್ಯಾತರಾಗಿದ್ದರು. ಅಲ್ಲದೆ, ಈಗಲೂ ಆ ಪಾತ್ರದಿಂದಾಗಿ ಅವರನ್ನು ಶ್ರೀರಾಮಚಂದ್ರನಂತೆ ಗೌರವ ನೀಡುತ್ತಾರೆ.