Publish Date: Fri, 19 Mar 2021 (08:01 IST)
Updated Date: Fri, 19 Mar 2021 (08:02 IST)
ಜೈಪುರ : ರಾಜಸ್ಥಾನದಲ್ಲಿ ಬುಡಕಟ್ಟು ಮಹಿಳೆಯೊಬ್ಬಳ ಮೇಲೆ ಗನ್ ಪಾಯಿಂಟ್ ಇಟ್ಟು ಬೆದರಿಸಿ ಮಾನಭಂಗ ಎಸಗಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.
ಮಹಿಳೆ ಹೊಲವನ್ನು ಕಾಯುತ್ತಿದ್ದಾಗ ಅಲ್ಲಿಗೆ ಬಂದ ಆರೋಪಿ ಆಕೆಗೆ ಗನ್ ತೋರಿಸಿ ಹೆದರಿಸಿ ಮಾನಭಂಗ ಎಸಗಿದ್ದಾನೆ. ಹಾಗೇ ವಿಷಯ ಯಾರಿಗಾದರೂ ತಿಳಿಸಿದರೆ ತೀವ್ರ ಪರಿಣಾಮಗಳಿಗೆ ಬಲಿಯಾಗುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಘಟನೆ ಭರತ್ ಪುರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.