Select Your Language

Notifications

webdunia
webdunia
webdunia
webdunia

ಪತಿಯನ್ನು ಕಟ್ಟಿಹಾಕಿ ಐವರು ಪುರುಷರಿಂದ ಪತ್ನಿಯ ಮೇಲೆ ಮಾನಭಂಗ

ಪತಿಯನ್ನು ಕಟ್ಟಿಹಾಕಿ ಐವರು ಪುರುಷರಿಂದ ಪತ್ನಿಯ ಮೇಲೆ ಮಾನಭಂಗ
ಜೈಪುರ , ಮಂಗಳವಾರ, 16 ಮಾರ್ಚ್ 2021 (07:44 IST)
ಜೈಪುರ : ಪತಿಯನ್ನು ಕಟ್ಟಿ ಹಾಕಿ 30 ವರ್ಷದ ಮಹಿಳೆಯ ಮೇಲೆ ಐವರು ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆ ಪತಿಯ ಜೊತೆ ಮೋಟಾರ್ ಬೈಕ್ ನಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ದಾರಿಯಲ್ಲಿ ಅಡ್ಡಗಟ್ಟಿದ ಐವರು ಪುರುಷರು ಅವರನ್ನು ಬಲವಂತವಾಗಿ ಹೊಲಕ್ಕೆ ಎಳೆದುಕೊಂಡು ಹೋಗಿ ಪತಿಯನ್ನು ಕಟ್ಟಿಹಾಕಿ ಪತ್ನಿಯ ಮೇಲೆ ಮಾನಭಂಗ ಎಸಗಿದ್ದಾರೆ.

ಈ ಐವರು ಆರೋಪಿಗಳಲ್ಲಿ ಒಬ್ಬಾತ ಸಂತ್ರಸ್ತೆಯ ಮಾಜಿ ಪತಿಯ ಸಹೋದರ ಎನ್ನಲಾಗಿದ್ದು, ಮಾಜಿ ಪತಿಯ ಕುಟುಂಬದವರ ಮೇಲೆ ದೂರು ದಾಖಲಿಸಿದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗೆ ಚಿಕಿತ್ಸೆ ನೀಡಲು ಆಗದೆ ನಿರುದ್ಯೋಗಿ ಪತಿ ಹೀಗಾ ಮಾಡೋದು?