Publish Date: Mon, 15 Mar 2021 (09:44 IST)
Updated Date: Mon, 15 Mar 2021 (09:45 IST)
ಮುಂಬೈ: ಟೀಂ ಇಂಡಿಯಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಗೀತಾ ಬಸ್ರಾ, ಪುತ್ರಿ ಸೂನ್ ಟು ಬಿ ಬಿಗ್ ಸಿಸ್ಟರ್ ಎಂಬ ಬರಹವಿರುವ ಟಿ ಶರ್ಟ್ ಹಿಡಿದಿರುವ ಫೋಟೋ ಪ್ರಕಟಿಸಿದ್ದು, ಸದ್ಯದಲ್ಲೇ ಇನ್ನೊಂದು ಮಗುವಿನ ತಾಯಾಗುತ್ತಿರುವುದಾಗಿ ಹೇಳಿದ್ದಾರೆ.
ಭಜಿ ಮತ್ತು ನಟಿ ಗೀತಾ ಬಸ್ರಾ 2015 ರಲ್ಲಿ ವಿವಾಹವಾಗಿದ್ದರು. ಇವರಿಗೆ ಈಗಾಗಲೇ ಓರ್ವ ಪುತ್ರಿಯಿದ್ದಾಳೆ. ಜುಲೈನಲ್ಲಿ ಗೀತಾ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ. ದಂಪತಿ ಈ ಸಿಹಿ ಸುದ್ದಿ ಪ್ರಕಟಿಸುತ್ತಿದ್ದಂತೇ ಕ್ರಿಕೆಟಿಗ ಸುರೇಶ್ ರೈನಾ, ನಟಿ ನೇಹಾ ದುಪಿಯಾ ಸೇರಿದಂತೆ ಸೆಲೆಬ್ರಿಟಿಗಳು, ಅಭಿಮಾನಿಗಳು ಶುಭ ಕೋರಿದ್ದಾರೆ.