Publish Date: Sun, 14 Mar 2021 (10:05 IST)
Updated Date: Sun, 14 Mar 2021 (10:07 IST)
ಮುಂಬೈ: ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಒಂದೇ ಓವರ್ ನ ಆರೂ ಎಸೆತಗಳನ್ನು ಸಿಕ್ಸರ್ ಗಟ್ಟಿದ್ದು ಇಂದಿಗೂ ಕ್ರಿಕೆಟ್ ಪ್ರಿಯರ ಮನಸ್ಸಲ್ಲಿ ಅಚ್ಚಳಿಯದ ನೆನಪಾಗಿದೆ. ಯುವಿ ಅಂತಹದ್ದೇ ಜಾದೂವನ್ನು ಮತ್ತೆ ತೋರಿಸಿದ್ದಾರೆ.
ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲು ಆರು ದೇಶಗಳ ನಡುವೆ ನಡೆಯುತ್ತಿರುವ ಹಿರಿಯರ ಕ್ರಿಕೆಟ್ ಟೂರ್ನಿಯಲ್ಲಿ ಭಾರತದ ಪರ ಯುವರಾಜ್ ಸಿಂಗ್ ಒಂದೇ ಓವರ್ ನಲ್ಲಿ ಸತತ ನಾಲ್ಕು ಸಿಕ್ಸರ್ ಸಿಡಿಸಿದ್ದಾರೆ.
ದ.ಆಫ್ರಿಕಾ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಯುವಿ 18 ನೇ ಓವರ್ ನಲ್ಲಿ ಝಾಂಡರ್ ಡಿ ಬ್ರೂಯ್ನ್ ಎಸೆತದಲ್ಲಿ ಈ ಜಾದೂ ಮಾಡಿದ್ದಾರೆ. ಇದರೊಂದಿಗೆ ಭಾರತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 204 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಅಂತಿಮವಾಗಿ ಆಫ್ರಿಕಾ 147 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಯುವಿ ಅಜೇಯ 52 ರನ್ ಗಳಿಸಿದರೆ, ಸಚಿನ್ ಕೂಡಾ ಅರ್ಧಶತಕ ಗಳಿಸಿ ಮಿಂಚಿದರು. ಇದರೊಂದಿಗೆ ಭಾರತ ಸೆಮಿಫೈನಲ್ ಗೆ ಲಗ್ಗೆಯಿಟ್ಟಿತು.