Publish Date: Sat, 13 Mar 2021 (10:54 IST)
Updated Date: Sat, 13 Mar 2021 (10:56 IST)
ಅಹಮ್ಮದಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದ ವೇಳೆ ಮೈದಾನದಲ್ಲಿ ಉಪಸ್ಥಿತರಿದ್ದ ಭಾರೀ ಸಂಖ್ಯೆಯ ಪ್ರೇಕ್ಷಕರನ್ನು ನೋಡಿ ಪಾಕ್ ವೇಗಿ ಅಮೀರ್ ಯಮೀನ್ ವ್ಯಂಗ್ಯ ಮಾಡಿದ್ದಾರೆ.
ಈಗ ಎಲ್ಲಿ ಹೋಯ್ತು ಕೊರೋನಾ? ಎಂದು ಅಮೀರ್ ವ್ಯಂಗ್ಯ ಮಾಡಿದ್ದಾರೆ. ವಿಶ್ವದ ಬೃಹತ್ ಕ್ರೀಡಾಂಗಣ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ 67,200 ಮಂದಿ ವೀಕ್ಷಕರು ಸಾಕ್ಷಿಯಾಗಿದ್ದರು. ಈ ಬೃಹತ್ ವೀಕ್ಷಕರ ಸಂಖ್ಯೆಯ ಬಗ್ಗೆ ಐಸಿಸಿ ಅಂಕಿ ಅಂಶ ನೀಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್ ಬೌಲರ್ ಈಗ ಕೊರೋನಾ ಎಲ್ಲಿ ಹೋಯ್ತು? ಎಂದು ವ್ಯಂಗ್ಯ ಮಾಡಿದ್ದಾರೆ. ಕೊರೋನಾ ಕಾರಣದಿಂದ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಅತ್ತ ಪಾಕಿಸ್ತಾನ ಇತ್ತೀಚೆಗೆ ಕೊರೋನಾ ಕಾರಣದಿಂದ ಪಾಕಿಸ್ತಾನ ಕ್ರಿಕೆಟ್ ಲೀಗ್ ಕೂಟವನ್ನೂ ರದ್ದು ಮಾಡಿತ್ತು. ಅತ್ತ ಅಂತಾರಾಷ್ಟ್ರೀಯ ಪಂದ್ಯಗಳನ್ನೂ ಸುರಕ್ಷಿತವಾಗಿ ಆಯೋಜಿಸಲು ಹೆಣಗಾಡುತ್ತಿದೆ. ಈ ನಡುವೆ ಭಾರತ ಮತ್ತು ಬಿಸಿಸಿಐಗೆ ಪಾಕ್ ವೇಗಿ ಈ ರೀತಿ ವ್ಯಂಗ್ಯ ಮಾಡಿದ್ದಾರೆ.