Publish Date: Sat, 13 Mar 2021 (09:49 IST)
Updated Date: Sat, 13 Mar 2021 (09:53 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ ಬಳಿಕ ಮನೆಗೆ ಮರಳಿದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಮಗಳು ತರ್ಲೆ ಮಾಡಿ ಸ್ವಾಗತ ಕೋರಿದ್ದಾಳೆ.
ತಂದೆ-ಮಗಳ ಮುದ್ದಾದ ವಿಡಿಯೋವನ್ನು ಪತ್ನಿ ಪ್ರೀತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಕೆಲವು ದಿನಗಳ ಬಳಿಕ ಮನೆಗೆ ಬಂದ ಅಪ್ಪನಿಗೆ ಮಗಳು ಪ್ರೀತಿಯಿಂದಲೇ ಟಾರ್ಚರ್ ಮಾಡಿದ್ದು ಹೀಗೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ. ತಂದೆಯ ತೊಡೆಯೇರಿ ಕೂತಿರುವ ಮಗಳು ಅಶ್ವಿನ್ ಗೆ ಕೀಟಲೆ ಮಾಡುವ ವಿಡಿಯೋವನ್ನು ಅವರು ಪ್ರಕಟಿಸಿದ್ದಾರೆ.
ಇಂಗ್ಲೆಂಡ್ ಸರಣಿಯಲ್ಲಿ ಸರಣಿ ಪುರುಷೋತ್ತಮರಾಗಿ ಹೊರಹೊಮ್ಮಿದ ಅಶ್ವಿನ್ ಐಸಿಸಿ ನೀಡುವ ಮಾಸಿಕ ಆಟಗಾರ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸದ್ಯಕ್ಕೆ ಕೆಲವು ದಿನಗಳ ಬ್ರೇಕ್ ಬಳಿಕ ಅವರು ಐಪಿಎಲ್ ಗೆ ಸಿದ್ಧತೆ ನಡೆಸಲಿದ್ದಾರೆ.