Publish Date: Fri, 12 Mar 2021 (07:17 IST)
Updated Date: Fri, 12 Mar 2021 (07:18 IST)
ಜಬಲ್ಪುರ : ವ್ಯಕ್ತಿಯೊಬ್ಬ ತನ್ನ ಸಹೋದರಿಯನ್ನು ವಿವಾಹವಾದ ವ್ಯಕ್ತಿಯ ತಲೆ ಕತ್ತರಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಸಹೋದರಿ ಹಾಗೂ ಸಂತ್ರಸ್ತ ಇಬ್ಬರು ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದರು. ಇದರಿಂದ ಬೇಸರಗೊಂಡಿದ್ದ ಮಹಿಳೆಯ ಸಹೋದರ ಆಕೆಯ ಪತಿಯ ತಲೆ ಕತ್ತರಿಸಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಇತ್ತ ಪತಿಯ ಸಾವಿನ ವಿಚಾರ ಕೇಳಿ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.