Publish Date: Wed, 10 Mar 2021 (07:35 IST)
Updated Date: Wed, 10 Mar 2021 (07:36 IST)
ಕೋಟಾ : ಇಬ್ಬರು ಸೋದರ ಸಂಬಂಧಿಗಳು ಚಲಿಸುತ್ತಿರುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ತಾನದ ಬುಂಡಿ ಜಿಲ್ಲೆಯಲ್ಲಿ ನಡೆದಿದೆ.
ಇಬ್ಬರು ಒಂದೇ ಗ್ರಾಮದವರಾಗಿದ್ದು, ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದರು ಎಂಬುದಾಗಿ ತಿಳಿದುಬಂದಿದೆ. ಇಬ್ಬರು ಸಾಯುವ ಮುನ್ನ ವಿಡಿಯೋ ಮಾಡಿ ತಮ್ಮ ಸಾವಿಗೆ ತಾವೇ ಕಾರಣವೆಂದು ಹಾಗೂ ಮನೆಯವರಲ್ಲಿ ಕ್ಷಮೆಯಾಚಿಸಿದ್ದಾರೆ. ಅಲ್ಲದೇ ಹುಡುಗಿ ಮನೆಯವರಿಗೆ ಒಳ್ಳೆ ಜಾತಿಯ ಹುಡುಗನೊಂದಿಗೆ ಮದುವೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
pavithra
Publish Date: Wed, 10 Mar 2021 (07:35 IST)
Updated Date: Wed, 10 Mar 2021 (07:36 IST)