Publish Date: Sat, 27 Feb 2021 (09:24 IST)
Updated Date: Sat, 27 Feb 2021 (09:25 IST)
ಮಧುರೈ : ಮನೆ ಬಾಡಿಗೆ ಪಾವತಿಸದ ಹಿನ್ನಲೆಯಲ್ಲಿ ಮನೆ ಮಾಲೀಕನಿಂದ ಕಿರುಕುಳಕ್ಕೊಳಗಾದ 48 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಹಿಳೆ ಬಾಡಿಗೆ ಮನೆಯಲ್ಲಿ ಎರಡು ತಿಂಗಳಿನಿಂದ ವಾಸವಾಗಿದ್ದು, ಬಾಡಿಗೆ ಪಾವತಿಸಿರಲಿಲ್ಲ. ಇದರಿಂದ ಮಾಲೀಕ ಮತ್ತು ಮಹಿಳೆಯ ನಡುವೆ ವಾಗ್ವಾದ ನಡೆಯುತ್ತಿತ್ತು. ಮಹಿಳೆ ಬಾಡಿಗೆ ನೀಡಲು ಸ್ವಲ್ಪ ಸಮಯ ಕೇಳಿದ್ದಳು. ಇದರಿಂದ ಕೋಪಗೊಂಡ ಮಾಲೀಕ ನೀರಿನ ಸರಬರಾಜುವನ್ನು ಕಡಿತಗೊಳಿಸಿದ್ದಾನೆ. ನೊಂದ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂತ್ರಸ್ತೆಯ ಪತಿ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.