Publish Date: Mon, 15 Feb 2021 (11:21 IST)
Updated Date: Mon, 15 Feb 2021 (11:22 IST)
ಭೋಪಾಲ್ : ಅತ್ಯಾಚಾರಕ್ಕೊಳಗಾದ 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗಾಂಧಿ ನಗರದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದೆ ಯುವತಿಯ ಮೇಲೆ ಮಾನಭಂಗ ನಡೆದಿದೆ. ಇದರಿಂದ ಯುವತಿ ಖಿನ್ನತೆಗೆ ಒಳಗಾಗಿದ್ದಳು. ತಾಯಿ, ತಂದೆ ಸಹೋದರ ಮನೆಯಲ್ಲಿ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.