Publish Date: Mon, 15 Feb 2021 (10:57 IST)
Updated Date: Mon, 15 Feb 2021 (10:58 IST)
ಬೆಂಗಳೂರು : ಗಾಯಗೊಂಡ ಅಪರಿಚಿತ ವ್ಯಕ್ತಿ ಹಾಗೂ ಸಹಚರನಿಗೆ ಸಹಾಯ ಮಾಡಲು ಬಂದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ಮಾಡಿ ದರೋಡೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸಂತ್ರಸ್ತ ಮುಂಜಾನೆ ವೇಳೆ ಕಾಲಿಗೆ ಬ್ಯಾಂಡೇಜ್ ಹಾಕಿದ ವ್ಯಕ್ತಿ ತನ್ನ ಸಹಚರನೊಂದಿಗೆ ನಡೆದು ಹೋಗುತ್ತಿರುವುದನ್ನು ನೋಡಿ ಅವರ ಸಹಾಯಕ್ಕೆ ಬಂದ ಆ ವೇಳೆ ಮೂವರು ಮೊಟಾರ್ ಸೈಕಲ್ ನಲ್ಲಿ ಬಂದು ಐವರು ಸೇರಿ ಆತನನ್ನು ಅಪಹರಿಸಿದ್ದಾರೆ. ಬಳಿಕ ಆತನಿಂದ ಹಣವನ್ನು ಕಿತ್ತುಕೊಂಡು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸಂತ್ರಸ್ತ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.