Select Your Language

Notifications

webdunia
webdunia
webdunia
webdunia

ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಹುಡುಗಿಗೆ ಇಂತಹ ಗತಿ ತಂದ ಯುವಕರು

ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ ಹುಡುಗಿಗೆ ಇಂತಹ ಗತಿ ತಂದ ಯುವಕರು
ಪಿಲಿಭಿತ್ , ಸೋಮವಾರ, 15 ಫೆಬ್ರವರಿ 2021 (10:54 IST)
ಪಿಲಿಭಿತ್ : ಲೈಂಗಿಕ ದೌರ್ಜನ್ಯವನ್ನು ವಿರೋಧಿಸಿದ್ದಕ್ಕೆ ಯುವಕರಿಬ್ಬರು ಸೇರಿ 16ವರ್ಷದ ಹುಡುಗಿಯನ್ನು ಟೆರೇಸ್ ಮೇಲಿಂದ ‍ತಳ್ಳಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಯುವಕರಿಬ್ಬರು ತನ್ನ ತಂದೆ ಮತ್ತು ಜಾತಿಯನ್ನು ಟೀಕಿಸಿದ್ದಕ್ಕೆ ಕೋಪಗೊಂಡ ಹುಡುಗಿ ಯುವಕರ ಜೊತೆ ಜಗಳಕ್ಕೀಳಿದಿದ್ದಾಳೆ. ಆ ವೇಳೆ ಕೆರಳಿದ ಯುವಕರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ್ದಾರೆ. ಇದನ್ನು ಹುಡುಗಿ ವಿರೋಧಿಸಿದ್ದಾಳೆ. ಆ ವೇಳೆ ಆಕೆಯ ತಂದೆ ಬರುತ್ತಿರುವುದನ್ನು ನೋಡಿದ ಯುವಕರು ಹುಡುಗಿಯನ್ನು ಟೆರೇಸ್ ಮೇಲಿಂದ ತಳ್ಳಿದ್ದಾರೆ. ಇದರಿಂದ ಹುಡುಗಿ ಮೂಳೆ ಮುರಿತಕ್ಕೊಳಗಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಡುಗೆ ಮಾಡಲಿಲ್ಲ ಎಂದು ಪತಿ ಹಾಗೂ ಮಲಮಗ ಸೇರಿ ಹೀಗಾ ಮಾಡೋದು?