Publish Date: Mon, 15 Feb 2021 (10:51 IST)
Updated Date: Mon, 15 Feb 2021 (10:54 IST)
ಪ್ರತಾಪ್ ಗರ್ : 65 ವರ್ಷದ ಮಹಿಳೆಯನ್ನು ಆಕೆಯ ಪತಿ ಮತ್ತು ಮಲಮಗ ಸೇರಿದಂತೆ ನಾಲ್ವರು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಪ್ರತಾಪ್ ಗರ್ ನಲ್ಲಿ ನಡೆದಿದೆ.
ಅಡುಗೆ ಮಾಡಲಿಲ್ಲ ಎಂಬ ಕೋಪಕ್ಕೆ ಪತಿ ಹಾಗೂ ಆತನ ಮೊದಲನೇ ಪತ್ನಿಯ ಮಗ ಮತ್ತು ಇನ್ನಿಬ್ಬರು ಸೇರಿ ಕೊಲೆ ಮಾಡಿ ಶವವನ್ನು ಕಾಲುವೆಗೆ ಎಸೆದಿದ್ದಾರೆ. ಬಳಿಕ ಮಹಿಳೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದಾರೆ. ಆದರೆ ಮಹಿಳೆಯ ಶವ ಪತ್ತೆಯಾದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಸತ್ಯಾಂಶ ತಿಳಿದುಬಂದಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಎನ್ನಲಾಗಿದೆ.