Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡ ವ್ಯಕ್ತಿಯನ್ನು ಕೊಂದ ದುರುಳರು

ಅನೈತಿಕ ಸಂಬಂಧದ ಬಗ್ಗೆ ತಿಳಿದುಕೊಂಡ ವ್ಯಕ್ತಿಯನ್ನು ಕೊಂದ ದುರುಳರು
ಗಾಜಿಯಾಬಾದ್ , ಗುರುವಾರ, 11 ಫೆಬ್ರವರಿ 2021 (09:28 IST)
ಗಾಜಿಯಾಬಾದ್ : ವ್ಯಕ್ತಿಯೊಬ್ಬ ತನ್ನಿಂದ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಮಹಿಳೆಯ ಸಹಾಯದಿಂದ ಮತ್ತೊಬ್ಬ ವ್ಯಕ್ತಿಯನ್ನು  ಕೊಲೆ ಮಾಡಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

ಆರೋಪಿ ಮಹಿಳೆ , ಆರೋಪಿ ವ್ಯಕ್ತಿಯಿಂದ ಸಾಲಪಡೆದಿದ್ದಳು, ಆದರೆ ಅದನ್ನು ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಆರೋಪಿ ವ್ಯಕ್ತಿ ತನ್ನೊಂದಿಗೆ ದೈಹಿಕ ಸಂಬಂಧ ಹೊಂದುವಂತೆ ಹೇಳಿದ್ದಾನೆ. ಅದರಂತೆ ಆಕೆ ಆತನ ಜೊತೆ ಒಂದು ವರ್ಷದಿಂದ ಸಂಬಂಧದಲ್ಲಿದ್ದಳು. ಆದರೆ ಈ ವಿಚಾರ ಸಂತ್ರಸ್ತನಿಗೆ ತಿಳಿದ ಹಿನ್ನಲೆಯಲ್ಲಿ ಇಬ್ಬರು ಸೇರಿ ಆತನನ್ನು ಕೊಲೆ ಮಾಡಿ ಶವವನ್ನು  ಸೂಟ್ ಕೇಸ್ ನಲ್ಲಿ ತುಂಬಿ ಎಸೆದಿದ್ದಾರೆ.

ಶವ ಪತ್ತೆಯಾದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ನಿಜಾಂಶ ತಿಳಿದುಬಂದಿದೆ. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯಂತೆ ವೇಷ ಹಾಕಿ ಹೆದ್ದಾರಿಯಲ್ಲಿ ದರೋಡೆ ಮಾಡುತ್ತಿದ್ದರು!